ಬೆಂಗಳೂರು: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿದೇಶಿ ತಂತ್ರಜ್ಞಾನದ ‘ಜಿಸ್ಯಾಟ್-30’ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಕಾಶ ಕೇಂದ್ರದಿಂದ ಭಾರತೀಯ ಕಾಲಮಾನದಂತೆ ತಡರಾತ್ರಿ 2:35 ಕ್ಕೆ ‘ಎರೇನ್ 5’ ರಾಕೆಟ್ ಮೂಲಕ ಜಿಸ್ಯಾಟ್-30 ಜೊತೆಗೆ ಫ್ರೆಂಚ್ನ EUTELSAT KONNECT ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ್ದು, 3,357 ಕೆ.ಜಿ ತೂಕದ ಜಿಸ್ಯಾಟ್-30 ಉಪಗ್ರಹ ಮುಂದಿನ 15 ವರ್ಷಗಳ ಕಾಲ ದೂರಸಂಪರ್ಕ ಸೇವೆಯನ್ನು ಒದಗಿಸಲಿದೆ ಎಂದು ಇಸ್ರೋ ಮೂಲಗಳು ತಿಳಿಸಿದ್ದು, ಈ ಉಪಗ್ರಹ ಟೆಲಿಪೋರ್ಟ್ ಸೇವೆ, ಡಿಟಿಹೆಚ್, ಡೌನ್ ಲಿಂಕಿಂಗ್ ಹಾಗೂ ಟೆಲಿವಿಷನ್ ಅಪ್ ಲಿಂಕಿಂಗ್ ಸೇರಿ ಹಲವು ಸಂವಹನ ಆಧಾರಿತ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ನೀಡಲಿದೆ.










