ಚಿಕ್ಕಮಗಳೂರು : ಯಾವುದೇ ದಾಖಲೆ ಇಲ್ಲದೆ ಭಾರತಕ್ಕೆ ಬಂದರೆ ಅದನ್ನು ಸಹಿಸಲು ಆಗುವುದಿಲ್ಲ : ಶೋಭಾ ಕರಂದ್ಲಾಜೆ.

251
firstsuddi

ಚಿಕ್ಕಮಗಳೂರು : ಪೌರತ್ವ ಕಾಯ್ದೆಯಡಿ ಭಾರತದಲ್ಲೇ ಹುಟ್ಟಿದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ. ರಾಷ್ಟ್ರ ಜಾಗರಣಾ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ಮೊದಲಿನಿಂದಲೂ ವಿಶ್ವದ ಸಾಕಷ್ಟು ಜನಾಂಗಗಳಿಗೆ ಆಶ್ರಯ ನೀಡಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆಯಡಿ ಭಾರತದ ಪೌರತ್ವ ನೀಡಲಾಗುತ್ತಿದೆ. ವೀಸಾದ ಕಾಲಾವಧಿ ಮುಗಿದ ಬಳಿಕ ಯಾವ ದೇಶದಲ್ಲೂ ಇರುವಂತಿಲ್ಲ. ಅದೇ ರೀತಿ ನಮ್ಮ ದೇಶದಲ್ಲೂ ಮಾಡುವುದು ತಪ್ಪಲ್ಲ. ಯಾವುದೇ ದಾಖಲೆ ಇಲ್ಲದೆ ಭಾರತಕ್ಕೆ ಬಂದರೆ ಅದನ್ನು ಸಹಿಸಲು ಆಗುವುದಿಲ್ಲ. ಈ ಪೌರತ್ವ ಕಾಯ್ದೆಯಡಿ ಭಾರತದಲ್ಲೇ ಹುಟ್ಟಿದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ಅವರ ಪೌರತ್ವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ಮಾತನಾಡಿದ ಆದರ್ಶ ಗೋಖಲೆ ಅವರು, ಸ್ವಾತಂತ್ರ್ಯ ಬರುವುದಕ್ಕೂ ಮೊದಲು ನಮ್ಮವರೇ ಆಗಿ, ಸ್ವಾತಂತ್ರ್ಯ ಬಂದ ಬಳಿಕ ಬೇರೆ ಆದ ಭಾರತದ ಭೂ-ಭಾಗಗಳಲ್ಲಿ ಬದುಕಿದ್ದ ನಮ್ಮವರಿಗೆ ಮತ್ತೆ ಭಾರತದ ಪೌರತ್ವ ನೀಡುವ ಕಾನೂನು ಇದಾಗಿದೆ ಎಂದರು.