ಈ ಟಿಪ್ಸ್ ಫಾಲೋ ಮಾಡಿ…ಖರ್ಚಿಲ್ಲದೆ ಬೊಜ್ಜನ್ನು ಕರಗಿಸಿ…

550

    ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಬೊಜ್ಜು. ಹೌದು, ಕೆಲಸದ ಒತ್ತಡ ಬದಲಾಗುತ್ತಿರುವ ಜೀವನ ಶೈಲಿಗೆ ಹೊಂದಿಕೊಳ್ಳುತ್ತಾ ಆರೋಗ್ಯಕರ ಆಹಾರ ಸೇವಿಸುವಲ್ಲಿ ವಿಫಲರಾಗುತ್ತಾರೆ. ಇಂದು ಕೇವಲ ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳು ಕೂಡಾ ಈ ಬೊಜ್ಜಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಅನಗತ್ಯ ತೂಕ ಹೆಚ್ಚಿದಂತೆ ಡಯಾಬಿಟಿಸ್, ಹೈ ಬಿಪಿ, ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹಲವು ಸಮಸ್ಯೆಗಳು ಕಾಡ ತೊಡಗುತ್ತದೆ. ಕೆಲವರು ಬೊಜ್ಜನ್ನು ಶೀಘ್ರವಾಗಿ ಕರಗಿಸಬೇಕೆಂದು ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಔಷಧಿಗಳನ್ನು, ಮಾತ್ರೆಗಳನ್ನು ಸೇವಿಸತೊಡಗಿದರೆ ಇನ್ನು ಕೆಲವರು ಒಂದೆರಡೊತ್ತು ಊಟವನ್ನೇ ಬಿಟ್ಟು ಬಿಡುತ್ತಾರೆ. ಇದು ಪರಿಹಾರವಲ್ಲ, ಊಟ ಬಿಡುವುದರಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಕಾಡ ತೊಡಗುತ್ತದೆ. ಹಾಗಾದರೆ ನೈಸರ್ಗಿಕವಾಗಿ ಹೇಗೆ ಅನಗತ್ಯ ಬೊಜ್ಜನ್ನು ಕರಗಿಸಬಹುದು ಎಂದು ತಿಳಿಯೋಣ.

ಬೊಜ್ಜು ಕರಗಿಸಲು ಸರಳ ಟಿಪ್ಸ್

• ಬೊಜ್ಜನ್ನು ಕರಗಿಸಲು ಅತೀ ಹೆಚ್ಚು ನೀರನ್ನು ಕುಡಿಯಬೇಕು. ಇದರಿಂದ ಹಸಿವು ಕಡಿಮೆಯಾಗುತ್ತದೆ ಹಾಗೂ ದೇಹವನ್ನು ಶುದ್ಧವಾಗಿಡಲು ಸಹಕಾರಿ.
• ಪ್ರತಿದಿನ ವ್ಯಾಯಾಮಕ್ಕೆ ಎಂದು ಸಮಯ ನಿಗದಿ ಮಾಡಿ ಖಡ್ಡಾಯವಾಗಿ ವ್ಯಾಯಾಮ ಮಾಡುವುದರಿಂದ ಅನಗತ್ಯ ಬೊಜ್ಜನ್ನು ಕರಗಿಸಬಹುದು.
• ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು. ಆದರೆ ಹಿತ ಮಿತ ಪ್ರಮಾಣದಲ್ಲಿ ಸೇವಿಸಬೇಕು.
• ಆಹಾರ ಸೇವಿಸಿದ ತಕ್ಷಣ ಮಲಗಬಾರದು, ಸ್ವಲ್ಪ ಓಡಾಡಬೇಕು.
• ಪ್ರತಿದಿನ ನಿದ್ರೆ ಮಾಡುವುದಕ್ಕೆ ಸಮಯ ನಿಗದಿ ಮಾಡಿ ಸಮಯಕ್ಕೆ ಸರಿಯಾಗಿ ನಿದ್ರಿಸಬೇಕು.
• ಜಂಕ್‍ಫುಡ್ ಸೇವನೆಯನ್ನು ನಿಲ್ಲಿಸಬೇಕು.
• ಮಸಾಲೆಯುಕ್ತ ಹಾಗೂ ಎಣ್ಣೆಯಿಂದ ತಯಾರಿಸಿದ ಪದಾರ್ಥಗಳಿಂದ ದೂರವಿರಬೇಕು.
• ಪೋಷಕಾಂಶಯುಕ್ತ ಆಹಾರ ಸೇವಿಸಬೇಕು, ಆದಷ್ಟು ಹಸಿ ತರಕಾರಿಗಳನ್ನು ಸೇವಿಸುವುದು ಉತ್ತಮ.
• ಮಕ್ಕಳ ಅನಗತ್ಯ ಕೊಬ್ಬನ್ನು ಕರಗಿಸಲು ಹೊರಾಂಗಣ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ, ಕಂಪ್ಯೂಟರ್, ಮೊಬೈಲ್‍ನಲ್ಲಿ ಗೇಮ್ ಆಡುವುದನ್ನು ನಿಯಂತ್ರಿಸಬೇಕು. ಇದರಿಂದ ಮಕ್ಕಳ ಅನಗತ್ಯ ಕೊಬ್ಬನ್ನು ಕರಗಿಸಬಹುದು.
• ಮಧ್ಯಪಾನ ಮತ್ತು ಧೂಮಪಾನದಿಂದ ಆದಷ್ಟು ದೂರವಿರುವುದು ಉತ್ತಮ.