ಮೂಡಿಗೆರೆ : ಫಲ್ಗುಣಿ ಗ್ರಾ.ಪಂ ವತಿಯಿಂದ ವಿಕಲಚೇತನರ ಅನುದಾನದಲ್ಲಿ ವ್ಹೀಲ್ ಚೇರ್ ವಿತರಣೆ…

213
firstsuddi

ಬಣಕಲ್ : ಫಲ್ಗುಣಿ ಗ್ರಾ.ಪಂ ವತಿಯಿಂದ ಫಲಾನುಭವಿಗಳಾದ ಸವಿತಾ ಮತ್ತು ಗಣೇಶ್ ಅವರಿಗೆ ವ್ಹೀಲ್ ಚೇರ್ ಮತ್ತು ಹ್ಯಾಂಡ್ ಸ್ಟಿಕ್ ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷರಾದ ರತ್ನಮ್ಮ ಮಾತನಾಡಿ ಫಲ್ಗುಣಿ ಗ್ರಾ.ಪಂ ವತಿಯಿಂದ ಶೇ 5 ವಿಕಲಚೇತನರ ಅನುದಾನದಲ್ಲಿ ಫಲಾನುಭವಿಗಳಿಗೆ ವ್ಹೀಲ್ ಚೇರ್ ಮತ್ತು ಹ್ಯಾಂಡ್ ಸ್ಟಿಕ್ ವಿತರಿಸಲಾಗಿದ್ದು ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಡಿಓ ಯತೀಶ್, ಗ್ರಾ.ಪಂ ಉಪಾಧ್ಯಕ್ಷೆ ರಮ್ಯಪದ್ಮಕುಮಾರ್, ಸದಸ್ಯರಾದ ಧನಿಕ್ ಕುಮಾರ್, ಮಂಜುನಾಥ್, ಮಜೀದ್, ಜಾಬೀರ್ ಹುಸೇನ್, ದೇವಕಿ ಶಾಂತಪ್ಪ, ಕೋಮಲ, ಮಂಜುಳಾ, ಸಿಬ್ಬಂದಿಗಳಾದ ಜ್ಯೋತಿ, ರಾಜೇಶ್, ಸುರೇಶ್, ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.