ಉಡುಪಿ: ಭಾರತದಲ್ಲಿ ಲಕ್ಷ ಲಕ್ಷ ಮಸೀದಿ ಚರ್ಚ್ ಕಟ್ಟಿದ್ದಾರೆ ಆದರೆ ಇಂದು ನಮ್ಮ ದೇಶ ನಮ್ಮ ಭೂಮಿಯಲ್ಲಿ ಇಷ್ಟೆಲ್ಲ ಕಟ್ಟಿ ನಮಗೇ ವಿರೋಧಿಸುತ್ತಿದ್ದಾರೆ ಇದು ಖಂಡನೀಯವಾಗಿದೆ ಎಂದು ಆರ್ ಎಸ್ ಎಸ್ ನಾಯಕರಾದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಶುಕ್ರವಾರ ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯಿದೆ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.ಕನಕಪುರದಲ್ಲಿ ಮತಾಂತರ ಮಾಡುವ ಉದ್ದೇಶವನ್ನಿಟ್ಟುಕೊಂಡು ಮುನೀಶ್ವರ ಬೆಟ್ಟದಲ್ಲಿ ಏಸು ಪ್ರತಿಮೆಯನ್ನು ನಿರ್ಮಿಸಲು ಹೊರಟಿದ್ದಾರೆ. ಕ್ರೈಸ್ತರು ಶಿಲುಬೆಯನ್ನು ಪೂಜಿಸುವ ಮೊದಲೇ ಅಲ್ಲಿ ಹಿಂದೂಗಳು ಮುನೀಶ್ವರ ದೇವರನ್ನು ಆರಾಧನೆ ಮಾಡುತ್ತಿದ್ದರು. ಶುಕ್ರವಾರ ಇರುವ ಅಲ್ಲಾಹ್ ಶನಿವಾರ ಎಲ್ಲಿ ಹೋಗ್ತಾನೆ, ಭಾನುವಾರ ಬರುವ ಏಸು ಉಳಿದ ದಿನ ಎಲ್ಲಿ ಹೋಗ್ತಾನೆ. ಈ ದೇಶದಲ್ಲಿ ಮುಸಲ್ಮಾನರು ಕ್ರೈಸ್ತರು ಶಾಂತಿಯುತವಾಗಿ ಬದುಕಬೇಕಾದರೆ ಅದಕ್ಕೆ ಹಿಂದೂ ಸಮಾಜದ ಅಗತ್ಯವಿದೆ ಎಂದರು.
72 ವರ್ಷದಲ್ಲಿ ದೇಶ ಭೂಮಿ ಕಳೆದುಕೊಂಡಿತು ಇಂದು ಭಾರತ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ. ದೇಶ ವಿಭಜನೆ ಮಾಡುವ ಮೊದಲು ದೇಹ ವಿಭಜನೆ ಮಾಡಿ ಎಂದಿದ್ದರು ಮಹಾತ್ಮಾ ಗಾಂಧಿಜಿ ಆದರೆ ವಿಭಜನೆ ನಂತರ ಇಬ್ಬರು ದೇಶದ ಪ್ರಮುಖ ನಾಯಕರಾದರು. ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರು ಅಲ್ಲದೆ ಅಧಿಕಾರಕ್ಕಾಗಿ ದೇಶವನ್ನು ತುಂಡು ಮಾಡಿದರು ಎಂದರು.ಅಂಬೇಡ್ಕರ್ ರಾಷ್ಟ್ರೀಯ ನಾಯಕ ಆದರೆ ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂದು ಅಂಬೇಡ್ಕರ್ ಭಾರತದ ಮುಸಲ್ಮಾನ ರು ಪಾಕಿಸ್ತಾನಕ್ಕೆ ಹೋಗಲಿ ಪಾಕ್ ಹಿಂದೂಗಳು ಭಾರತಕ್ಕೆ ಬರಲಿ ಎಂದು ಸಲಹೆ ಕೊಟ್ಟಿದ್ದರು. ಅಂಬೇಡ್ಕರ್ ಹೇಳಿದಂತೆ ಮಾಡಬೇಕಿತ್ತು.










