ಮೂಡಿಗೆರೆ : ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ನೆರೆಸಂತ್ರಸ್ತರಿಗೆ ನಿವೇಶನ ಹಕ್ಕು ಪತ್ರ ವಿತರಣೆ…

475
firstsuddi

ಮೂಡಿಗೆರೆ : ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ರಣಭೀಕರ ಮಳೆಗೆ ಮನೆ ಕಳೆದುಕೊಂಡ ತಾಲೂಕಿನ ಬಾಳೂರು ಹೋಬಳಿ ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಮಧುಗುಂಡಿ, ಹಲಗಡಕ ಎಸ್ಟೇಟ್, ದುರ್ಗದಹಳ್ಳಿ ಗ್ರಾಮದ ನೆರೆ ಸಂತ್ರಸ್ತರಿಗೆ ನಿವೇಶನ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ನೆರೆಯಿಂದ ಮನೆ ಕಳೆದುಕೊಂಡ 44 ಕುಟುಂಬಗಳಿಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ನಿವೇಶನ ಹಕ್ಕುಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸುಂಕಸಾಲೆ ಗ್ರಾ.ಪಂ ಅಧ್ಯಕ್ಷ ದಿವಾಕರ್, ಪಿಡಿಓ ಪದ್ಮರಾಜ್, ಗ್ರಾಮ ಲೆಕ್ಕಾಧಿಕಾರಿ ಗಿರೀಶ್, ರಾಜಸ್ವ ನಿರೀಕ್ಷಕ ಮಹೇಶ್, ಬಿಜೆಪಿ ಮುಖಂಡ ಆದರ್ಶ್ ತರುವೆ ಇದ್ದರು.