ನಾನು ಮಹಾತ್ಮ ಗಾಂಧಿ ಅವರ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ : ಸಂಸದ ಅನಂತ್ ಕುಮಾರ್ ಹೆಗ್ಡೆ.

246
firstsuddi

ನವದೆಹಲಿ : ಮಹಾತ್ಮ ಗಾಂಧೀಜಿ ಕುರಿತು ನಾನು ವಿವಾಧಾತ್ಮಕ ಹೇಳಿಕೆಯನ್ನು ನೀಡಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೆ ಹೈಕಮಾಂಡ್ ನೀಡಿರುವ ನೊಟೀಸ್‍ಗೆ ನಾನು ಉತ್ತರ ನೀಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್‍ಗೆ ಬಿಟ್ಟಿದ್ದು. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಈ ಕುರಿತು ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ನಾನು ಯಾವುದೇ ಪಕ್ಷ ಅಥವಾ ಪ್ರತ್ಯೇಕ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿಕೆ ನೀಡಿರಲಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟ ಹೇಗಿತ್ತು ಎಂಬುವುದನ್ನು ಹೇಳಿದ್ದೆ. ನಾನು ಹೇಳಿಕೆ ನೀಡಿರುವ ವೀಡಿಯೋ ಈಗಲೂ ಯೂಟ್ಯೂಬ್‍ನಲ್ಲಿ ಇದೆ. ಯಾರು ಬೇಕಾದರೂ ಕೇಳಬಹುದು. ನಾನು ಮಹಾತ್ಮ ಗಾಂಧಿ ಅವರ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಗಾಂಧಿ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಿರುವಾಗ ನಾನು ಏಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.