ದಾವಣಗೆರೆ : ಕೌಟುಂಭಿಕ ಕಲಹ ಹಿನ್ನೆಲೆ, ವ್ಯಕ್ತಿಯೋರ್ವ ಟಿಕ್ಟಾಕ್ ವೀಡಿಯೋ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜು(34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದ್ದು, ನಾಗರಾಜು ಅವರಿಗೆ ಮದುವೆಯಾಗಿ ಮೂವರು ಹೆಣ್ಣು ಮಕ್ಕಳು ಇದ್ದು, ಯಾವಾಗಲೂ ಟಿಕ್ಟಾಕ್ನಲ್ಲಿ ಸಕ್ರೀಯರಾಗಿದ್ದ ನಾಗರಾಜು ಅವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಇಬ್ಬರು ಬೇರೆಯಾಗಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದ ನಾಗರಾಜು ಅವರು ನೇಣು ಬಿಗಿದುಕೊಳ್ಳುತ್ತಿರುವ ವೀಡಿಯೋವನ್ನು ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಿ ಬಳಿಕ ಮೃತಪಟ್ಟಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










