ಚಿಕ್ಕಮಗಳೂರು : ಕುಮಾರಸ್ವಾಮಿ ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ : ಸಚಿವ ಬಿ. ಶ್ರೀರಾಮುಲು.

291

ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಕುಮಾರಸ್ವಾಮಿ ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ. ಕುಮಾರಸ್ವಾಮಿ ಅವರು ಕೀಳು ಮಟ್ಟದ ಶಬ್ದಗಳನ್ನು ಬಳಸುತ್ತಿದ್ದಾರೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿಲ್ಲ. ರಾಜ್ಯದ ಜನರಿಗೆ ಗೊತ್ತಿದೆ ಯಾರ ಮನೆ, ಯಾರು ಹಾಳು ಮಾಡಿದ್ದಾರೆಂದು. ನಾನು ಆ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾತನಾಡಿರುವ ಭಾಷೆಯೇ ಬೇರೆ, ನನ್ನ ಭಾಷೆಯೇ ಬೇರೆ. ಶ್ರೀರಾಮುಲು ಯಾರು ಹಾಗೂ ಕುಮಾರಸ್ವಾಮಿ ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ ಎಂದರು.