ಕೊರೊನಾ ವೈರಸ್‍ಗೆ ಔಷಧಿ ಕಂಡುಹಿಡಿದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ…

1329
firstsuddi

ಬೆಂಗಳೂರು : ಚೀನಾದಲ್ಲಿ ಮಹಾಮಾರಿ ಕೊರೊನಾ ವೈರಸ್ ಗೆ 640ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇತ್ತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೊರೊನಾ ವೈರಸ್‍ಗೆ ನಾನು ಔಷಧಿಯನ್ನು ಕಂಡುಹಿಡಿದಿದ್ದೇನೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋದಲ್ಲಿ ನಾನು ಕೊರೊನಾವನ್ನು ಗುಣಪಡಿಸುತ್ತೇನೆ. ನಾನು ಈ ವೈರಸ್‍ಗೆ ಔಷಧಿಯನ್ನು ಕಂಡುಹಿಡಿದಿದ್ದೇನೆ. ಇಂದಿನಿಂದ ನಾನು ಚಿಕಿತ್ಸೆ ಆರಂಭಿಸುತ್ತಿದ್ದೇನೆ. ನಾನು ಹೇಳುವ ಮಂತ್ರವನ್ನು 48ಗಂಟೆಗಳ ಕಾಲ ಪಠಿಸಿದರೆ ಕೊರೊನಾ ವೈರಸ್ ನಿಮ್ಮ ದೇಹ ಬಿಟ್ಟು ಹೋಗುತ್ತದೆ. “ಓಂ ನಿತ್ಯಾನಂದ ಪರಮ ಶಿವೋಹಂ” ಎಂಬ ಮಂತ್ರವನ್ನು 48 ಗಂಟೆಗಳ ಕಾಲ ಪಠಿಸಿದರೆ ಕೊರೊನಾ ವೈರಸ್ ದೇಹ ಬಿಟ್ಟು ಹೋಗುತ್ತದೆ. ಶುಕ್ರವಾರದಿಂದ ಭಾನುವಾರದವರೆಗೂ ಕೈಲಾಸದಲ್ಲಿ ಸ್ಪೆಷಲ್ ಕ್ಲಾಸ್ ಇರುತ್ತದೆ. ಕೊರೊನಾ ಪೀಡಿತರು ಇಲ್ಲಿ ಬಂದು ಸೇರಿ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.