ಚಿಕ್ಕಮಗಳೂರು : ದೇಶದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ : ಶೋಭ ಕರಂದ್ಲಾಜೆ.

289
firstsuddi

ಚಿಕ್ಕಮಗಳೂರು : ನಗರದ ಸಂಸದರ ಕಚೇರಿಯಲ್ಲಿ ಮಾತನಾಡಿದ ಸಂಸದೆ ಶೋಭ ಕರಂದ್ಲಾಜೆ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ರಾಹುಲ್ ಗಾಂಧಿ ಅವರು ಯಾವುದೇ ಸುದ್ದಿಯಲ್ಲಿಲ್ಲ. ಸೋನಿಯಾ ಗಾಂಧಿ ಅವರು ಕೂಡಾ ಸುದ್ದಿಯಲ್ಲಿ ಇಲ್ಲ. ದೇಶದ ಜನತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮರೆಯುತ್ತಿದ್ದಾರೆ. ಮೀಡಿಯಗಳಿಗೂ ಕೂಡಾ ಅವರು ಮಹತ್ವದ ವ್ಯಕ್ತಿಗಳು ಅನ್ನಿಸಿಲ್ಲ. ಹೀಗಾಗಿ ಏನಾದರೂ ಮಾಡಿ ಸುದ್ದಿಯಾಗಬೇಕು ಎಂದು ರಾಹುಲ್ ಗಾಂಧಿ ಅವರು ಪ್ರಯತ್ನಿಸುತ್ತಿದ್ದಾರೆ. ಅವರು ದಂಡೋ ಮಾರೋ ಎಂದು ಯಾರಿಗೆ ಹೇಳಿದ್ದಾರೆ. ಅವರು ಈ ಹೇಳಿಕೆಯನ್ನು ಗಡಿಯಲ್ಲಿ ಹೋಗಿ ಹೇಳಬೇಕು. ನುಸುಳುಕೋರರು, ಹಾಗೂ ಅಕ್ರಮ ವಾಸಿಗಳು ಬರುತ್ತಿದ್ದಾರೆ. ಅವರ ಪರವಾಗಿ ಒಂದು ಕಡೆ ನಿಲ್ಲುತ್ತಾರೆ. ಮತ್ತೊಂದೆಡೆ ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಅವರ ಬಗ್ಗೆ ದಂಡೋ ಮಾರೋ ಎಂದು ಹೇಳುತ್ತಾರೆ. ಇದು ಕಾಂಗ್ರೆಸ್‍ನ ಮಾನಸಿಕತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಅವನತಿಯ ಶವಪೆಟ್ಟಿಗೆಗೆ ಇದು ಕೊನೆಯ ಮೊಳೆ ಎಂಬುವುದು ನನ್ನ ಅನಿಸಿಕೆ ಎಂದು ಕಿಡಿಕಾರಿದ್ದಾರೆ.