ಆಟೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ-ಆರು ಮಂದಿ ಸಾವು…

181
firstsuddi

ಆಂಧ್ರಪ್ರದೇಶ : ಆಟೋ ಹಾಗೂ ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನ ಫಿರಂಗಿಪುರಂನ ಮಂಡಲ್ ಗ್ರಾಮದ ಬಳಿ ನಡೆದಿದೆ. ಮೃತರನ್ನು ಕಾಕನಿ ರಾಮದೇವಿ, ಕಾಕನಿ ಯಶೇಶ್ವಿ, ಮತ್ತು ಕಾಕನಿ ಮಾಣಿಕಾಂತ ಎಂದು ಗುರುತಿಸಲಾಗಿದ್ದು, ಮೃತಪಟ್ಟ ಇನ್ನೂ ಮೂವರ ಮಾಹಿತಿ ಲಭ್ಯವಾಗಿಲ್ಲ. ನರಸಾವ್ ಪೇಟೆಯಿಂದ ಫಿರಂಗಿಪುರಂ ಕಡೆಗೆ ಸಾಗುತ್ತಿದ್ದ ಆಟೋ ಎದುರಿಗೆ ಬರುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಇನ್ನು ಇಬ್ಬರಿಗೆ ಗಂಭಿರ ಗಾಯವಾಗಿದ್ದು, ಅವರನ್ನು ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಸ್ಥಳಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.