ಕೊಟ್ಟಿಗೆಹಾರ : ಶ್ರದ್ದೆ ಮತ್ತು ಏಕಾಗ್ರತೆಯಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗುವ ಮೂಲಕ ಒತ್ತಡ ರಹಿತವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಜಾವಳಿಯ ಹೇಮಾವತಿ ಶ್ರೀಮಹಾಗಣಪತಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಂ.ವಿ ಜಗದೀಶ್‍ಗೌಡ ಹೇಳಿದರು.
ಜಾವಳಿಯ ಬಿ.ಜಿ.ಎಸ್ ಶಿಕ್ಷಣ ಟ್ರಸ್ಟ್, ಶ್ರೀಲಕ್ಷ್ಮಣ್ ರಾವ್ ಗುರ್ಜರ್ ಫ್ರೌಡಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ನಡೆದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ವಿಶೇಷ ತರಗತಿಯ ಉಧ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯೆ ಮೊದಲ ಆದ್ಯತೆಯಾಗಬೇಕು. ಮೊಬೈಲ್, ಟಇವಿ ಮುಂತಾದ ಆಕರ್ಷಣೆಗೆ ಒಳಗಾಗದೇ ಹೆಚ್ಚಿನ ಸಮಯ ಓದಿನಲ್ಲಿ ತೊಡಗಿಕೊಳ್ಳಬೇಕು. ಮೊಬೈಲ್ ಟಿವಿಗಳ ಅತಿಯಾದ ವೀಕ್ಷಣೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಕಣ್ಣಿನ ಸಮಸ್ಯೆ, ತಲೆನೋವಿನಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೊಬೈಲ್, ಟಿವಿಯ ದಾಸರಾಗದೇ ಕಲಿಕೆಯ ಕಡೆಗೆ ಗಮನ ಹರಿಸಬೇಕಿದೆ ಎಂದರು.
ಧರ್ಮಸ್ಥಳ ಯೋಜನೆಯ ಕೃಷಿ ಮೇಲ್ವಿಚಾರಕ ಹರೀಶ್ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಯನ್ನು ಪೋತ್ಸಾಹಿಸಲು ತಾಲ್ಲೂಕಿನ ಹಲವು ಫ್ರೌಡಶಾಲೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನುರಿತ ಉಪನ್ಯಾಸಕರನ್ನು ಕರೆಸಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಹೊನ್ನಯ್ಯ ಮಾತನಾಡಿ ಇಂತಹ ವಿಶೇಷ ತರಗತಿಗಳ ಮೂಲಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯ ಏಳಿಗೆಗೆ ಶಿಕ್ಷಕರು ಹಾಗೂ ಪೋಷಕರ ಪಾತ್ರವೂ ಮಹತ್ವದಾಗಿದೆ ಎಂದರು.
ಜಾವಳಿ ವಲಯ ಮೇಲ್ವಿಚಾರಕ ಚಿತ್ತರಂಜನ್, ಸೇವಾ ಪ್ರತಿನಿಧಿ ಸಂದೀಪ್, ಶಾಲಾ ಶಿಕ್ಷಕರು ಹಾಜರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯೆ ಮೊದಲ ಆದ್ಯತೆಯಾಗಬೇಕು : ಎಂ.ವಿ ಜಗದೀಶ್‍ಗೌಡ.










