ಬಳ್ಳಾರಿ : ಕಾರು ಅಪಘಾತಕ್ಕೆ ಇಬ್ಬರು ಸಾವು-ಕಾರಿನಲ್ಲಿದ್ದದ್ದು ಪ್ರಭಾವಿ ರಾಜಕಾರಣಿಯ ಪುತ್ರ…?

218
firstsuddi

ಬೆಂಗಳೂರು : ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿಯ ಹೊಸಪೇಟೆ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆ ಕಾರನ್ನು ಬೆಂಗಳೂರಿನ ಪ್ರಭಾವಿ ರಾಜಕಾರಣಿಯ ಪುತ್ರ ಚಲಾಯಿಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ. ರವಿ ನಾಯಕ್(19) ಹಾಗೂ ಕಾರಿನಲ್ಲಿದ್ದ ಸಚಿನ್ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಕಾರನ್ನು ಸಚಿವ ಆರ್.ಅಶೋಕ್ ಅವರ ಪುತ್ರ ಶರತ್ ಚಲಾಯಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಸಾಕ್ಷಿಗಳಿದ್ದರೂ ಪೊಲೀಸರೂ ಅಶೋಕ್ ಅವರ ಪುತ್ರನನ್ನು ರಕ್ಷಣೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ.