ಚಿಕ್ಕಮಗಳೂರು : ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾಶಿವರಾತ್ರಿ ಆಚರಣೆ…

256
firstsuddi

ಚಿಕ್ಕಮಗಳೂರು : ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾಶಿವರಾತ್ರಿ ಆಚರಣೆ ಶುಕ್ರವಾರ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಶ್ರೀ ಬೋಳರಾಮೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು, ರಾತ್ರಿ 8 ರಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿಯಿಡೀ ನಿರಂತರವಾಗಿ ಅಭಿಷೇಕ ನಡೆಯಿತು.
ಬೆಳಿಗ್ಗೆ ಸೂರ್ಯೋದಯದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು, ಹಬ್ಬದ ಪ್ರಯುಕ್ತ ಭಕ್ತರು ನಸುಕಿನಲ್ಲೇ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಸಂಜೆ ನಂತರ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು, ರಾತ್ರಿಯಿಡೀ ಭಕ್ತರಿಂದ ಭಜನೆ, ನಾಮಸಂಕೀರ್ತನೆ ಜರುಗಿತು.