ನವದೆಹಲಿ : ಸುಪ್ರೀಂ ಕೋರ್ಟ್‍ನ ಆರು ಮಂದಿ ನ್ಯಾಯಾಧೀಶರಿಗೆ ಹೆಚ್1ಎನ್1 ಸೋಂಕು ತಗುಲಿದ್ದು, ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ನ್ಯಾಯಾಧೀಶರು ನ್ಯಾ. ಎಸ್.ಎ ಬೊಬ್ಡೆ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ನ್ಯಾ. ಡಿ.ವೈ ಚಂದ್ರಚೂಡಾ ಅವರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ 6 ನ್ಯಾಯಾಧೀಶರು ಹೆಚ್1ಎನ್1 ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸಿಜೆಐ ಎಸ್.ಎ ಬೊಬ್ಡೆ ಅವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಆರು ಮಂದಿ ನ್ಯಾಯಾಧೀಶರಿಗೆ ಹೆಚ್1ಎನ್1 ಕಾಯಿಲೆ ಇರುವ ಹಿನ್ನೆಲೆ, ಇಂದು ನ್ಯಾಯಾಲಯಕ್ಕೆ ಉಳಿದ ನ್ಯಾಯಾಧೀಶರು ಮುಖಕ್ಕೆ ಮಾಸ್ಕನ್ನು ಧರಸಿ ಆಗಮಿಸಿದ್ದು, ಉಳಿದ ನ್ಯಾಯಾಧೀಶರಿಗೆ ಸೋಂಕು ತಗುಲದಂತೆ ನ್ಯಾಯಾಲಯದಲ್ಲಿ ಚುಚ್ಚುಮದ್ದು ಸಿಗುವ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ನ್ಯಾ. ಚಂದ್ರಚೂಡಾ ಅವರು ತಿಳಿಸಿದ್ದಾರೆ. ಸೋಂಕು ತಗುಲಿರುವ 6 ಮಂದಿ ನ್ಯಾಯಾಧೀಶರಲ್ಲಿ ಇಬ್ಬರು ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿದ್ದು, ಅವರು ರಜೆ ತೆಗೆದುಕೊಂಡಿರುವುದರಿಂದ ವಿಚಾರಣೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.










