ಬೆಂಗಳೂರು : ಹಳೆಯ ವೀಡಿಯೋಗನ್ನು ಇಟ್ಟುಕೊಂಡು ಅವಧೂತ ವಿನಯ್ ಗುರೂಜಿ ಅವರಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುರಳಿ, ಮುನಿರಾಜು, ರವಿಕುಮಾರ್, ಮನೋಜ್ ಎಂದು ಗುರುತಿಸಲಾಗಿದ್ದು, ಈ ಐವರು ಆರೋಪಿಗಳು ವಿನಯ್ ಗುರೂಜಿ ಅವರ ಹಳೆಯ ವೀಡಿಯೋವನ್ನು ಎಡಿಟ್ ಮಾಡಿ ಯೂಟ್ಯೂಬ್‍ನಲ್ಲಿ ಹರಿಬಿಟ್ಟಿದರು. ಅಲ್ಲದೇ 30 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣಕ್ಕೆ ಬೇಡಿಕೆ ಇಟ್ಟಿದಲ್ಲದೇ ಜೀವಬೆದರಿಕೆಯನ್ನು ಒಡ್ಡಿದ್ದರು. ಈ ಕುರಿತು ವಿನಯ್ ಗುರೂಜಿ ಅವರ ಆಪ್ತ ಪ್ರಶಾಂತ್ ಅವರು ಪೊಲೀಸರಿಗೆ ದೂರನ್ನು ನೀಡಿದ್ದರು. ದೂರನ್ನು ದಾಖಲಿಸಿದ್ದ ಸಿಸಿಬಿ ಪೊಲೀಸರು ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.










