ಚಿಕ್ಕಮಗಳೂರು : ಕಾರುಗಳ ನಡುವೆ ಭೀಕರ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು…

250
firstsuddi

ಚಿಕ್ಕಮಗಳೂರು : ಕ್ವಿಡ್ ಕಾರು ಹಾಗೂ ಇನ್ನೋವಾ ಕಾರಿನ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುದುರೆಗುಂಡಿ ಬಳಿ ನಡೆದಿದೆ. ಮೃತರನ್ನು ಶಿವಮೊಗ್ಗ ಮೂಲದ ನಿವಾಸಿ ನಾಸಿರ್ ಹಾಗೂ ಮಹಮ್ಮದ್ ಆರಿಫ್ ಎಂದು ಗುರುತಿಸಲಾಗಿದ್ದು, ಮೃತರು ಇನ್ನೋವಾ ಕಾರಿನಲ್ಲಿ ಕೊಪ್ಪದಿಂದ ಶಿವಮೊಗ್ಗಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಶಿವಮೊಗ್ಗದಿಂದ ಕೊಪ್ಪ ಕಡೆಗೆ ಬರುತ್ತಿದ್ದ ಕ್ವಿಡ್ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಕ್ವಿಡ್ ಕಾರಿನ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಾರುಗಳು ಡಿಕ್ಕಿಯಾದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂ ಆಗಿದ್ದು, ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.