ಬೆಂಗಳೂರು : ಕೆಮಿಕಲ್ ಸ್ಪೋಟಗೊಂಡು ಓರ್ವ ವ್ಯಕ್ತಿಯ ಕಾಲು ತುಂಡಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆಂಜಿನಪ್ಪ(50) ಸ್ಪೋಟದಿಂದ ಗಾಯಗೊಂಡ ವ್ಯಕ್ತಿ. ಕೆಲವು ದುಷ್ಕರ್ಮಿಗಳು ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಇದ್ದ ಕಸದಲ್ಲಿ ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್ನ್ನು ಪ್ಲಾಸ್ಟಿಕ್ನಲ್ಲಿ ಕಟ್ಟಿ ಎಸಡದು ಹೋಗಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ಕೆಮಿಕಲ್ ರಿಯಾಕ್ಷನ್ನಿಂದ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಪಕ್ಕದಲ್ಲೇ ಇದ್ದ ವ್ಯಕ್ತಿಯ ಕಾಲು ತುಂಡಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಎಫ್ಎಸ್ಎಲ್ ಅಧಿಕಾರಿಗಳು ಸ್ಪೋಟಗೊಂಡ ಕೆಮಿಕಲ್ ಯಾವುದು ಎಂಬುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.










