ತಿರುವನಂತಪುರಂ : ಕೇರಳದ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿದೆ. ಐವರು ಸೋಂಕಿತರಲ್ಲಿ ಮೂವರು ಕಳೆದ ಕೆಲವು ದಿನಗಳ ಹಿಂದೆ ಇಟಲಿಯಿಂದ ವಾಪಸ್ಸಾಗಿದ್ದರು ಎನ್ನಲಾಗಿದ್ದು, ಈ ಕುರಿತು ಅವರು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಇಟಲಿಯಿಂದ ಬಂದ ಬಳಿಕ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಜ್ವರದಿಂದಾಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ವೈರಸ್ ತಗುಲಿರುವುದಾಗಿ ದೃಢಪಟ್ಟಿದ್ದು, ಬಳಿಕ ಕುಟುಂಬಸ್ಥರೆಲ್ಲರನ್ನೂ ತಪಾಸಣೆ ನಡೆಸಿದಾಗ ಇನ್ನೂ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಸದ್ಯ ಐವರು ಸೋಂಕಿತರನ್ನು ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.










