ಅಣ್ಣಾಮಲೈ ಅವರ ಬಳಿಕ ಮತ್ತೊಬ್ಬ ಐಪಿಸ್ ಅಧಿಕಾರಿ ಎಡಿಜಿಪಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ..!

388
firstsuddi

ಬೆಂಗಳೂರು: ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆಯಿಂದ ದೂರ ಸರಿದ ಬೆನ್ನಲ್ಲೇ ಕರ್ನಾಟಕದ ಮತ್ತೋರ್ವ ಐಪಿಎಸ್​ ಅಧಿಕಾರಿ ಸಂಜಯ್ ಸಹಾಯ್ ಅವರು ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ‘ಕರ್ನಾಟಕದ ಸಿಂಗಂ’ ಎಂದೇ ಹೆಸರಾಗಿದ್ದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಳೆದ ವರ್ಷ ಮೇ ತಿಂಗಳಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ್ದರು. ಇದೀಗ ಕರ್ನಾಟಕ ರಾಜ್ಯ ಗಣಕ ಪರಿಷತ್ ಎಡಿಜಿಪಿಯಾಗಿರುವ ಸಂಜಯ್ ಸಹಾಯ್ ಅವರು ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅನುಮತಿ‌ ಕೂಡ ನೀಡಿದೆ. ಮಾ. 31ರವರೆಗೆ ಸಂಜಯ್ ಸಹಾಯ್ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. ರಾಜ್ಯ ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಆಗಿರುವ ಸಂಜಯ್ ಸಹಾಯ್ ಅವರು 1989ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಇವರ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಕಲಂ 16(2) DCRB ನಿಯಮದಂತೆ ರಾಜ್ಯ ಸರ್ಕಾರ ಅನುಮತಿ ನೀಡಿ, ಆದೇಶ ಹೊರಡಿಸಿದೆ.