ಇಟಲಿ : ವಿಶ್ವದಾಧ್ಯಂತ ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿ ಎಲ್ಲರನ್ನೂ ಭಯಭೀತರನನ್ನಾಗಿಸಿದ್ದು, ಇದೀಗಾ ಭಾರತೀಯ ವಿದ್ಯಾರ್ಥಿಗಳು ಕೊರೊನಾ ಪೀಡಿತ ದೇಶವಾದ ಇಟಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಭರತಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ. ಚೀನಾವನ್ನು ಬಿಟ್ಟರೆ ಮಾರಣಾಂತಿಕ ಕೊರೊನಾ ವೈರಸ್‍ಗೆ ಅತಿ ಹೆಚ್ಚು ಮಂದಿ ಮೃತಪಟ್ಟಿರುವುದು ಇಟಲಿಯಲ್ಲಿ. ಹೀಗಾಗಿ ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯರು ಭಾರತಕ್ಕೆ ಬರಬೇಕಾದರೆ ಅವರಿಗೆ ಕೊರೊನಾ ಸೋಂಕು ಇಲ್ಲ ಎಂದು ಮೆಡಿಕಲ್ ಸರ್ಟಿಫಿಕೇಟ್ ಅಲ್ಲಿನ ಸರ್ಕಾರ ನೀಡಬೇಕಿದೆ. ಆದರೆ ಇಟಲಿಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿರುವುದರಿಂದ ಅಲ್ಲಿನ ಸರ್ಕಾರ ಮೆಡಿಕಲ್ ಸರ್ಟಿಫಿಕೇಟ್ ನೀಡಲು ತಡಮಾಡುತ್ತಿದ್ದು, ಹೀಗಾಗಿ ಭಾರತೀಯರು ಇಟಲಿಯಿಂದ ಭಾರತಕ್ಕೆ ಬರಲು ಪರದಾಡುತ್ತಿದ್ದಾರೆ. ಅಲ್ಲದೇ ಇವರಲ್ಲಿ ಕೆಲವು ಮಂದಿ ಕನ್ನಡಿಗರು ಇದ್ದು, ಇಲ್ಲಿನ ಸರ್ಕಾರ ಯಾವುದೇ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇತ್ತ ಇದಕ್ಕೆ ಸಂಬಂಧಿಸಿದಂತೆ ಇಲ್ಲಿನ ಭಾರತೀಯ ರಾಯಭರ ಕಚೇರಿ ಕೂಡಾ ಸ್ಪಂಧಿಸುತ್ತಿಲ್ಲ ಎನ್ನಲಾಗಿದೆ.










