ಮುಂಬೈ : ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕೇಂದ್ರ ಸರ್ಕಾರ ಏಪ್ರಿಲ್ 15ರವರೆಗೆ ವಿದೇಶಿ ವೀಸಾಗಳನ್ನು ರದ್ದುಗೊಳಿಸಿದ್ದು, ಹೀಗಾಗಿ ಏ.15ರವರೆಗೂ ಐಪಿಎಲ್ಗೆ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಐಪಿಎಲ್ ಆಡುವ ವಿದೇಶಿ ಆಟಗಾರರು ಬಿಸಿನೆಸ್ ವೀಸಾ ವಿಭಾಗದ ಮೂಲಕ ಭಾರತಕ್ಕೆ ಬರುತ್ತಾರೆ. ಹೀಗಾಗಿ ಸರ್ಕಾರ ಆದೇಶಿಸಿರುವಂತೆ ಏಪ್ರಿಲ್ 15ರವರೆಗೆ ಆಟಗಾರರು ಭಾರತಕ್ಕೆ ಬರಲು ಸಾಧ್ಯವಿಲ್ಲ. ಇದರಿಂದಾಗಿ ಮಾರ್ಚ್ 29ರಿಂದ ಆರಂಭವಾಗುವ ಐಪಿಎಲ್ ಮ್ಯಾಚ್ನಲ್ಲಿ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.










