ಚಿಕ್ಕಮಗಳೂರು : ಸಿಂಗಾಪುರದಿಂದ ಆಗಮಿಸಿದ ಮಹಿಳೆಗೆ ಕೊರೊನಾ ಶಂಕೆ-ಆಸ್ಪತ್ರೆಗೆ ದಾಖಲು…

434
firstsuddi

ಚಿಕ್ಕಮಗಳೂರು : ಸಿಂಗಾಪುರದಿಂದ ಆಗಮಿಸಿದ ಮಹಿಳೆಗೆ ಕೆಮ್ಮು, ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 6ದಿನಗಳ ಹಿಂದೆ ಸಿಂಗಾಪುರದಿಂದ ಚಿಕ್ಕಮಗಳೂರಿಗೆ ಆಗಮಿಸಿದ ಮಹಿಳೆಗೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿದ್ದು, ಜ್ವರ ನಿಯಂತ್ರಣಕ್ಕೆ ಬಾರದ ಕಾರಣ ಕೊರೊನಾ ವೈರಸ್ ತಗುಲಿರುವುದಾಗಿ ಶಂಕಿಸಿ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆಯ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‍ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.