ಚಿಕ್ಕಮಗಳೂರು : ಹೆಣ್ಣು ಮಗು ಎಂಬ ಕಾರಣಕ್ಕೆ 23ದಿನದ ಹಸುಗೂಸನ್ನು ಒಲೆಗೆ ಹಾಕಿ ಹತ್ಯೆ ಮಾಡಿದ ಕ್ರೂರಿ ತಾಯಿ…!

300
firstsuddi

ಚಿಕ್ಕಮಗಳೂರು : ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ 23ದಿನದ ಹಸುಗೂಸನ್ನು ಒಲೆಗೆ ಹಾಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ. ಸಂಗೀತಾ ತನ್ನ 23ದಿನದ ಕಂದಮ್ಮನನ್ನು ಹತ್ಯೆ ಮಾಡಿದ ಕ್ರೂರಿ ತಾಯಿ ಎಂದು ಗುರುತಿಸಲಾಗಿದ್ದು, ಮಗುವನ್ನು ಒಲೆಗೆ ಹಾಕುವುದಕ್ಕೂ ಮುನ್ನ ಮಗುವಿನ ಕುತ್ತಿಗೆಯನ್ನು ಕಚ್ಚಿದ್ದಾರೆ. ತಾಯಿಯ ಈ ಕೃತ್ಯದಿಂದ ಇಡೀ ಕಡೂರು ತಾಲ್ಲೂಕು ಬೆಚ್ಚಿ ಬಿದ್ದಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರೂರಿ ತಾಯಿಯನ್ನು ಹಾಗೂ ಮಗುವನ್ನು ಕೊಲೆ ಮಾಡಲು ಪ್ರೇರೇಪಿಸಿದವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.