ಕೇಂದ್ರ ಸರ್ಕಾರದಿಂದ 1.7 ಲಕ್ಷ ಕೋಟಿ ರೂ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ…

330
firstsuddi

ನವದೆಹಲಿ : ಮಾರಣಾಂತಿಕ ಕೊರೊನಾ ವೈರಸ್ ದೇಶಾಧ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು 21ದಿನಗಳ ಕಾಲ ಭಾರತ ಲಾಕ್‍ಡೌನ್ ಮಾಡಿ ಆದೇಶ ಮಾಡಿದ್ದು, ಈ ಹಿನ್ನೆಲೆ, 1.7 ಲಕ್ಷ ಕೋಟಿ ರೂ ಮೊತ್ತದ ಪರಿಹಾರ ಪ್ಯಾಕೇಜ್‍ನ್ನು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಘೋಷಣೆ ಮಾಡಿದ್ದಾರೆ.
• ಎಲ್ಲೆಡೆ ಕೊರೊನಾ ಭೀತಿಯಿಂದ ಭಾರತ ಲಾಕ್‍ಡೌನ್ ಆಗಿದ್ದರೂ ಸತತ ರೋಗಿಗಳ ಸೇವೆಯನ್ನು ಮಾಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್, ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ ವಿಮೆ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
• ಮುಂದಿನ 3 ತಿಂಗಳ ಕಾಲ ಜನ್‍ಧನ್ ಯೋಜನೆ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ತಿಂಗಳಿಗೆ 500 ರೂ.
• ಶೇ. 24ರಷ್ಟು ಇಪಿಎಫ್ ಹಣವನ್ನು ಸರ್ಕಾರ ಭರಿಸುತ್ತದೆ.
• ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ 8.69 ಕೋಟಿ ರೈತರಿಗೆ 2000 ರೂ.
• 3 ತಿಂಗಳ ಕಾಲ ಉಜ್ವಲ ಗ್ಯಾಸ್ ಸಬ್ಸಿಡಿ ಯೋಜನೆಯ 8.3 ಕೋಟಿ ಬಿಪಿಎಲ್ ಕುಟುಂಬ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್.
• ಮುಂದಿನ 3 ತಿಂಗಳ ಕಾಲ 80 ಕೋಟಿ ಜನರಿಗೆ 5 ಕೆ.ಜಿ ಗೋದಿ ಅಥವಾ ಅಕ್ಕಿ ಹಾಗೂ 1 ಕೆ.ಜಿ ಇತರ ಧಾನ್ಯಗಳು ಲಭಿಸಲಿವೆ.
• ವೃದ್ಧರಿಗೆ, ವಿಧವೆಯರಿಗೆ ವಿಕಲಚೇತನರಿಗೆ 3 ತಿಂಗಳ ಕಾಲ 1000 ರೂ ಸಹಾಯಧನ
• ಮನ್ರೇಗಾ ಯೋಜನೆಯಡಿ ದಿನಗೂಲಿ 180 ರಿಂದ 200 ರೂ ಗಳಿಗೆ ಏರಿಕೆ. ಇದರಿಂದ 5 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತದೆ.