ಚಿಕ್ಕಮಗಳೂರು : ನಿಜಾಮುದ್ದೀನ್ ತಬ್ಲಿಘಿ ಸಭೆಯ ಹಿಂದೆ ಕೊರೊನಾ ಜಿಹಾದಿಯ ವಾಸನೆ ಬಡಿಯುತ್ತಿದೆ : ಶೋಭಾ ಕರಂದ್ಲಾಜೆ.

364
firstsuddi

ಚಿಕ್ಕಮಗಳೂರು : ನಿಜಾಮುದ್ದೀನ್ ತಬ್ಲಿಘಿ ಸಭೆಯ ಹಿಂದೆ ಕೊರೊನಾ ಜಿಹಾದಿಯ ವಾಸನೆ ಬಡಿಯುತ್ತಿದೆ ಎಂದು ಸಂಸದೆ ಶೋಭಾ ಕೊರಂದ್ಲಾಜೆ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜಾಮುದ್ದೀನ್ ತಬ್ಲಿಘಿ ಸಭೆಯ ಹಿಂದೆ ಕೊರೊನಾ ಜಿಹಾದಿಯ ವಾಸನೆ ಬಡಿಯುತ್ತಿದೆ. ಈ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಮಂದಿ ಈಗಾ ತಲೆಮರೆಸಿಕೊಂಡಿದ್ದಾರೆ. ಕೊರೊನಾ ಶಂಕಿತರ ಪತ್ತೆ ಹಚ್ಚಲು ಒಂದು ಜನಾಂಗ ಸಹಕಾರ ನೀಡುತ್ತಿಲ್ಲ ಎಂಬುವುದಕ್ಕೆ ಬೆಂಗಳೂರಿನ ಸಿದ್ದಿಕ್ ಲೇಔಟ್‍ನಲ್ಲಿ ನಡೆದ ಆಶಾಕಾರ್ಯಕರ್ತೆಯರ ಮೇಲಿನ ಹಲ್ಲೆಯೇ ಸ್ಪಷ್ಟ ಉದಾಹರಣೆಯಾಗಿದೆ. ಹೀಗಾಗಿ ಅಂತವರನ್ನು ಪತ್ತೆ ಹಚ್ಚಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕಾಗಿದೆ. ನಮ್ಮ ನೆಲದ ಕಾನೂನನ್ನೇ ಪಾಲಿಸುವುದಿಲ್ಲ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತರವಿದೆ ಎಂದರು.