ದೇಶದಲ್ಲಿ ಕೊರೊನಾ ಅಟ್ಟಹಾಸ-ಕಳೆದ 12ಗಂಟೆಗಳಲ್ಲಿ 547 ಹೊಸ ಕೊರೊನಾ ಪ್ರಕರಣ ಪತ್ತೆ…

202
firstsuddi

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 12 ಗಂಟೆಗಳಲ್ಲಿ 547 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಂಕಿಅಂಶ ಬಿಡುಗಡೆ ಮಾಡಿದ್ದು, ದೇಶದಲ್ಲಿ ಈವರೆಗೂ ಮಹಾಮಾರಿ ಕೊರೊನಾ ವೈರಸ್‍ಗೆ 199ಮಂದಿ ಬಲಿಯಾಗಿದ್ದು, 5,709 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ 504ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತರು ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 1364ಕ್ಕೆ ಏರಿಕೆಯಾಗಿದ್ದು, ಈವರೆಗೂ ಮಹಾರಾಷ್ಟ್ರದಲ್ಲಿ 97ಮಂದಿ ಬಲಿಯಾಗಿದ್ದಾರೆ. ತಮಿಳುನಾಡು-834, ದೆಹಲಿ-720, ರಾಜಸ್ಥಾನ-463, ತೆಲಂಗಾಣ-442, ಉತ್ತರ ಪ್ರದೇಶ-410 ಹಾಗೂ ಕರ್ನಾಟಕ-197 ಪ್ರಕರಣ ದಾಖಲಾಗಿರುವ ವರದಿಯಾಗಿದೆ.