ದೇಶದಲ್ಲಿ ಕಳೆದ 24 ಗಂಟೆಯಲ್ಲಿ 991 ಹೊಸ ಕೊರೊನಾ ಪ್ರಕರಣ ದಾಖಲು-ಸೋಂಕಿತರ ಸಂಖ್ಯೆ 14,378ಕ್ಕೆ ಏರಿಕೆ…

158
firstsuddi

ನವದೆಹಲಿ : ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24ಗಂಟೆಯಲ್ಲಿ ದೇಶದಲ್ಲಿ 991 ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, 43ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ. ದೇಶದಲ್ಲಿ ಈವರೆಗೆ 14,378 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರಲ್ಲಿ 1992 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 480 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ ಭಾಗಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲೇ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದ್ದು, 3,323 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಸೋಂಕಿನಿಂದ 201 ಮಂದಿ ಮೃತಪಟ್ಟಿದ್ದಾರೆ. ನವದೆಹಲಿ 1,707 ಪ್ರಕರಣ ದಾಖಲಾಗಿದ್ದು, 42ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡು-1,323-ಸಾವು-15, ಮಧ್ಯಪ್ರದೇಶ-1,310, ಸಾವು-69, ರಾಜಸ್ಥಾನ-1,299, ಸಾವು-11, ಉತ್ತರ ಪ್ರದೇಶ-849, ಸಾವು-14 ತೆಲಂಗಾಣ-776, ಸಾವು-18, ಆಂಧ್ರಪ್ರದೇಶ-572, ಸಾವು-14 ಹಾಗೂ ಕರ್ನಾಟಕ-359, ಸಾವು-13 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.