ಬಂಧಿಸಲು ಹೋದ ಅರಣ್ಯ ಸಿಬ್ಬಂದಿಯನ್ನೇ ನೀರಿನಲ್ಲಿ ಮುಳುಗಿಸಿ ಸಾಯಿಸಿದ ಮೀನುಗಾರರು…!

211
firstsuddi

ಮೈಸೂರು: ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರನ್ನು ಬಂಧಿಸಲು ಹೋದ ಅರಣ್ಯ ಸಿಬ್ಬಂದಿಯನ್ನು ನೀರಿನಲ್ಲಿ ಮುಳುಗಿಸಿದ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತ ಅರಣ್ಯ ಸಿಬ್ಬಂದಿಯನ್ನು ಶಿವಕುಮಾರ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಎನ್ ಬೇಗೂರು ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ಕಳ್ಳರು ಅಕ್ರಮವಾಗಿ ಮೀನು ಹಿಡಿಯುತ್ತಿದ್ದರು. ಮಾಹಿತಿ ಮೇರೆಗೆ ಮೀನುಗಾರರನ್ನು ಹಿಡಿಯಲು ಮೈಸೂರು ಅರಣ್ಯ ಇಲಾಖೆಯ ಸಿಬ್ಬಂದಿ ಹರಿಗೋಲಿನಲ್ಲಿ ಹೋಗಿದ್ದರು. ಈ ವೇಳೆ ಮೀನುಗಾರರನ್ನು ಕಂಡು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆ ವೇಳೆ ಅರಣ್ಯ ಇಲಾಖೆಯ 4 ಜನರಿದ್ದ ಹರಿಗೋಲನ್ನೆ ನದಿಯಲ್ಲಿ ಕಳ್ಳರು ಮುಳುಗಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಈಜಿ ದಡ ಸೇರಿದರೆ ಇನ್ನಿಬ್ಬರು ನೀರಿನಲ್ಲಿ ಈಜಲಾಗದೆ ಮುಳುಗಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸುಂದರ್ ರಾಜ್ ಸೇರಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಕುರಿತು ಬೀಚನ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ