ಕೊಟ್ಟಿಗೆಹಾರ : ಮಾಹಾಮಾರಿ ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ನಗರದ ಆಟೋ ಚಾಲಕರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಕೊಟ್ಟಿಗೆಹಾರದ ಫ್ರೆಂಡ್ಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪಧಾಧಿಕಾರಿಗಳು ಒತ್ತಾಯಿಸಿದ್ದಾರೆ.
ಫ್ರೆಂಡ್ಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ವರು ಮಾತನಾಡಿ ಕಳೆದ ವರ್ಷದ ಮಳೆಗಾಲದ ನೆರೆಯಿಂದಾಗಿ ಆಟೋ ಚಾಲಕರ ಬದುಕು ತತ್ತರಿಸಿ ಹೋಗಿದ್ದು ಅದರಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಗಾಯದ ಮೇಲೆ ಬರೆ ಎಳೆದಿದೆ. ಆಟೋ ಚಾಲಕರು ಬಾಡಿಗೆ ಇಲ್ಲದೇ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ಬ್ಯಾಂಕ್‍ನಿಂದ ಸಾಲ ಮಾಡಿ ಆಟೋ ಖರೀದಿ ಮಾಡಿದ ಚಾಲಕರು ತಿಂಗಳ ಕಂತು ಕಟ್ಟಲಾರದೇ ಪರದಾಡುವಂತಾಗಿದ್ದು ಸರ್ಕಾರ ಆಟೋ ಚಾಲಕರ ಮತ್ತು ಮಾಲೀಕರ ನೆರವಿಗೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಆಟೋ ಸಂಘದ ಕಾರ್ಯದರ್ಶಿ ರಮೇಶ್, ಪಧಾಧಿಕಾರಿಗಳಾದ ಸುರೇಶ್, ಮಹೇಂದ್ರ, ಸುಲೇಮಾನ್, ಕುಂಜುಮೋಣು, ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರ ನೆರವಿಗೆ ಧಾವಿಸುವಂತೆ ಫ್ರೆಂಡ್ಸ್ ಆಟೋ ಸಂಘದ...










