ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪ್ರಶ್ನಿಸಿದ ತಾಯಿಗೆ ತಲೆಗೆ ಡಿಚ್ಚಿ ಹೊಡೆದ ಯುವಕ…

221
firstsuddi

ಬೆಂಗಳೂರು : ಮಹಡಿ ಮೇಲೆ ಒಣ ಹಾಕಿದ್ದ ಬಟ್ಟೆಯನ್ನು ತರಲು ಹೋಗಿದ್ದ ಯುವತಿ ಮುಂದೆ ಯುವಕ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸಿದ ಘಟನೆ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಈಜುಕೊಳ್ಳ ಬಡಾವಣೆಯಲ್ಲಿ ನಡೆದಿದೆ.
ಹಲವು ತಿಂಗಳಿನಿಂದ ಪಕ್ಕದ ಮನೆಯ 25 ವರ್ಷದ ಯುವಕನೊಬ್ಬ ಯುವತಿಗೆ ಅಶ್ಲೀಲ ಸನ್ನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ. ಏಪ್ರಿಲ್. 29ರಂದು ಸಂಜೆ ವೇಳೆ ಒಣ ಹಾಕಿದ್ದ ಬಟ್ಟೆಯನ್ನು ತರಲು ಮಹಡಿ ಮೇಲೆ ಹೋದಾಗ ಯುವಕ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದು, ಇದನ್ನು ಪ್ರಶ್ನಿಸಿದ ಯುವತಿಯ ತಾಯಿಯ ತಲೆಗೆ ಡಿಚ್ಚಿ ಹೊಡೆದು ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಯುವತಿಯ ತಾಯಿ ಸ್ಥಳೀಯ ಠಾಣೆಗೆ ದೂರು ದಾಖಲಿಸಿದ್ದಾರೆ.