ಕೊಟ್ಟಿಗೆಹಾರ : ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಕೋಟ್ಯಾಂತರ ರೂ ಅನುದಾನ ಬಂದಿದ್ದರೂ ಕ್ಷೇತ್ರದ ಅಭಿವೃದ್ದಿಗೆ ಕೆಲ ಗುತ್ತಿಗೆದಾರರು ತೊಡಕಾಗಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.
ಕೊಟ್ಟಿಗೆಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರು ಮುಖ್ಯಮಂತ್ರಿಯಾದ 15 ದಿನದಲ್ಲೆ 17 ಕೋಟಿ ಅನುದಾನ ಮೂಡಿಗೆರೆ ಕ್ಷೇತ್ರಕ್ಕೆ ನೀಡಿದ್ದಾರೆ. ಆ ನಂತರದಲ್ಲಿ 2019-20 ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 19 ಕೋಟಿ ಅನುದಾನ, ರಾಜ್ಯ ಹೆದ್ದಾರಿ ಅಭಿವೃದ್ದಿಗೆ 19 ಕೋಟಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ 36 ಕೋಟಿ, ಅತಿವೃಷ್ಟಿ ಅಬಿವೃದ್ದಿ ಕಾಮಗಾರಿ 20 ಕೋಟಿ, ಬಂಕೇನಹಳ್ಳಿ, ಮಾಲಿಂಗನಾಡು, ಮುಗ್ರಹಳ್ಳಿ ಸೇತುವೆ ಅಭಿವೃದ್ದಿಗೆ 8 ಕೋಟಿ, ಬಾರಿ ಮಳೆಯಿಂದ ಹಾನಿಯಾದ ರಸ್ತೆ ದುರಸ್ಥಿಗೆ 6 ಕೋಟಿ ಸೇರಿದಂತೆ ಹಲವಾರು ಸರ್ಕಾರದ ಅನುದಾನಗಳು ಕ್ಷೇತ್ರದ ಅಭಿವೃದ್ದಿಗೆ ಬಂದಿದೆ. ಆದರೆ ಕೆಲ ಗುತ್ತಿಗೆದಾರರು ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು ಕ್ಷೇತ್ರದ ಅಭಿವೃದ್ದಿಗೆ ತೊಡಕಾಗಿದ್ದಾರೆ. ಕೆಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಗುತ್ತಿಗೆದಾರರು ಕಾಮಗಾರಿ ಪ್ರಾರಂಭ ಮಾಡಿಲ್ಲ. ಕೆಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾರ್ಯಾದೇಶ ಪಡೆದುಕೊಂಡಿದ್ದರೂ ಗುತ್ತಿಗೆದಾರರು ಕಾಮಗಾರಿ ಪ್ರಾರಂಭ ಮಾಡಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ದಿಗೆ ತೊಡಕಾಗಿದೆ ಎಂದು ಆರೋಪಿಸಿದ್ದಾರೆ.
64 ಕೋಟಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸದ್ಯದಲ್ಲೆ ನಡೆಯಲಿದ್ದು ಇಂತಹ ಕೆಲ ಗುತ್ತಿಗೆದಾರರು ಮತ್ತೆ ಟೆಂಡರ್ನಲ್ಲಿ ಪಾಲ್ಗೊಂಡು ಅಬಿವೃದ್ದಿಗೆ ಮಾರಕವಾಗಿದ್ದಾರೆ. ಕ್ಷೇತ್ರದ ಅಭಿವೃದ್ದಿಯಾಗಬಾರದು ಎಂಬ ಉದ್ದೇಶದಿಂದ ಒಂದು ತಂಡ ನನ್ನ ವಿರುದ್ದ ಷಡ್ಯಂತ್ರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕ್ಷೇತ್ರದ ಅಭಿವೃದ್ದಿಗೆ ತೊಡಕಾದ ಗುತ್ತಿಗೆದಾರರು-ಶಾಸಕ ಎಂ.ಪಿ ಕುಮಾರಸ್ವಾಮಿ ಆರೋಪ…









