ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನ ಪತನ…

166
firstsuddi

ಪಂಜಾಬ್ : ಭಾರತೀಯ ವಾಯುಪಡೆಗೆ ಸೇರಿದ ಮಿಗ್-29 ಯುದ್ಧ ವಿಮಾನ ಪತನವಾಗಿರುವ ಘಟನೆ ಪಂಜಾಬ್‍ನ ನವನ್ ಶಹರ್‍ನ ಚುಹರ್ ಪುಹರ್ ಗ್ರಾಮದಲ್ಲಿ ನಡೆದಿದೆ. ಮಿಗ್-29 ಯುದ್ಧ ವಿಮಾನ ಜಲಂಧರ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಇಂದು ಬೆಳಿಗ್ಗೆ 10:30ರ ಸುಮಾರಿಗೆ ಪತನಗೊಂಡಿದ್ದು, ಈ ವೇಳೆ ಪೈಲೆಟ್ ಪ್ಯಾರಾಚೂಟ್ ಬಳಸಿಕೊಂಡು ಸುರಕ್ಷಿತವಾಗಿ ವಿಮಾನದಿಂದ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಐಎಎಫ್ ವಕ್ತಾರರೊಬ್ಬರು ತಿಳಿಸಿದ್ದಾರೆ.