ನಕ್ಸಲರು ಹಾಗೂ ಪೊಲೀಸರ ನಡುವೆ ಎನ್‍ಕೌಂಟರ್-ನಾಲ್ವರು ನಕ್ಸಲರ ಹತ್ಯೆ- ಪೊಲೀಸ್ ಸಬ್‌ಇನ್ಸ್​ಪೆಕ್ಟರ್​​ ಹುತಾತ್ಮ…

218
firstsuddi

ಛತ್ತೀಸ್‍ಗಢ : ನಕ್ಸಲರು ಹಾಗೂ ಪೊಲೀಸರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಪೊಲೀಸರು ನಾಲ್ವರು ನಕ್ಸಲರನ್ನು ಹತ್ಯೆಗೈದಿದ್ದು, ಈ ವೇಳೆ ಓರ್ವ ಪೊಲೀಸ್ ಸಬ್‌ಇನ್ಸ್​ಪೆಕ್ಟರ್​​  ಹುತಾತ್ಮರಾಗಿದ್ದಾರೆ. ಛತ್ತೀಸ್‍ಘಡದ ರಾಜನಂದಗಾಂವ್ ಹಾಗೂ ಮದನ್ವಾಡ್ ಅರಣ್ಯ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ನಕ್ಸಲರು ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಪೊಲೀಸರು ನಾಲ್ವರು ನಕ್ಸಲರನ್ನು ಹೊಡೆದುರುಳಿಸಿದ್ದು, ಈ ಕಾರ್ಯಾಚರಣೆಯಲ್ಲಿ ಮದನ್ವಾಡ್ ಪೊಲೀಸ್ ಠಾಣೆಯ ಸಬ್‌ಇನ್ಸ್​ಪೆಕ್ಟರ್​​  ಶ್ಯಾಮ್ ಕಿಶೋರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ. ಎನ್​ಕೌಂಟರ್​ನಲ್ಲಿ ಮೃತಪಟ್ಟ ನಾಲ್ವರು ನಕ್ಸಲರ ಮೃತದೇಹ ಹಾಗೂ ಅವರ ಬಳಿ ಇದ್ದ AK-47ರೈಫಲ್, 1 ಎಸ್ಎಲ್ಆರ್ ಬಂದೂಕು ಹಾಗೂ 315 ಬೊರಿ ರೈಫಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.