ಸಿಕ್ಕಿಂನಲ್ಲಿ ಹಿಮಾಪಾತಕ್ಕೆ ಸಿಲುಕಿ ಇಬ್ಬರು ಯೋಧರು ಹುತಾತ್ಮ…

161
firstsuddi

ನವದೆಹಲಿ : ಭಾರಿ ಹಿಮಾಪಾತ ಸಂಭವಿಸಿ ಭಾರತೀಯ ಸೇನೆಯ ಕರ್ನಲ್ ಹಾಗೂ ಒಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಉತ್ತರ ಸಿಕ್ಕಿಂನ ಲುಗ್ನಾಕ್ ಪ್ರದೇಶದಲ್ಲಿ ಇರುವ ಪರ್ವತದಲ್ಲಿ ನಡೆದಿದೆ. ಹಿಮಪಾತದಲ್ಲಿ ಸೇನೆಯ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಹಾಗೂ ಯೋಧ ಸಪಾಲ ಸನ್ಮಮುಖ ರಾವ್ ಅವರು ಹುತಾತ್ಮರಾಗಿದ್ದಾರೆ. ಲುಗ್ನಾಕ್ ಪ್ರದ್ರೇಶದಲ್ಲಿ ಕರ್ನಲ್ ಸೇರಿದಂತೆ ಒಟ್ಟು 18 ಮಂದಿ ಯೋಧರು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಏಕಾಏಕಿ ಹಿಮಾಪಾತ ಸಂಭವಿಸಿದ್ದು, ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಿಮದಲ್ಲಿ ಸಿಲುಕಿದ್ದ 18 ಮಂದಿ ಯೋಧರ ಪೈಕಿ 16 ಮಂದಿ ಯೋಧರನ್ನು ರಕ್ಷಿಸಿದ್ದು, ಘಟನೆಯಲ್ಲಿ ಕರ್ನಲ್ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.