ಮೂಡಿಗೆರೆ : ಬಾನಳ್ಳಿ ಸುತ್ತಮುತ್ತಾ ಕಾಡಾನೆಗಳ ಹಾವಳಿ-ಬೆಳೆಗಳು ನಾಶ…

404
firstsuddi

ಕೊಟ್ಟಿಗೆಹಾರ : ಬಾನಳ್ಳಿ ಸುತ್ತಮುತ್ತಾ ಕಾಡಾನೆಗಳು ಬಾನಳ್ಳಿ ಸುತ್ತಮುತ್ತಾ ಕಾಣಿಸಿಕೊಂಡಿದ್ದು ಬಾಳೆ, ಕಾಫಿ ಬೆಳೆಗಳನ್ನು ತುಳಿದು ನಾಶ ಮಾಡಿದೆ.
ಬಾನಳ್ಳಿಯಲ್ಲಿ ರಸ್ತೆಯಲ್ಲಿ ಕಾಡಾನೆಗಳು ಸಂಚರಿಸಿದ್ದು ಪ್ರತ್ಯಕ್ಷದರ್ಶಿಗಳು ಕಾಡಾನೆಗಳು ರಸ್ತೆಗಿಳಿದು ತೋಟಕ್ಕೆ ದಾಟುತ್ತಿರುವುದರ ವೀಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ.
ಬಾರಿ ಗಾತ್ರ ಎರಡು ಕಾಡಾನೆಗಳು ತೋಟವೊಂದರ ಬೇಲಿಯನ್ನು ದಾಟಿ ರಸ್ತೆಗಿಳಿದು ರಸ್ತೆಯಿಂದ ಮತ್ತೊಂದು ತೋಟದ ಬೇಲಿ ದಾಟುತ್ತಿರುವುದು ವೀಡಿಯೋ ದೃಶ್ಯದಲ್ಲಿ ಸೆರೆಯಾಗಿದೆ.
ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಉಮೇಶ್, ರಮೇಶ್, ಕುಮಾರ್, ಅರಣ್ಯ ರಕ್ಷಕರಾದ ಮೌಸಿನ್, ರಮೇಶ್, ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪಟಾಕಿ ಸಿಡಿಸಿ ಕುಂದೂರು ಸಾರಗೋಡು ಅರಣ್ಯಕ್ಕೆ ಅಟ್ಟಿದ್ದಾರೆ.