ಶ್ರೀನಗರ : ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ ನಲ್ಲಿ ಭಾರತೀಯ ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಜಮ್ಮು ಕಾಶ್ಮೀರಾದ ಕುಲ್ಗಾಂ ಜಿಲ್ಲೆಯ ಮಂಜ್ಗಾಮ್ ಪ್ರದೇಶದಲ್ಲಿ ಕೆಲವು ಉಗ್ರರು ಅಡಗಿಕುಳಿತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ತಿಳಿದ ಕುಲ್ಗಾಂ ಜಿಲ್ಲೆಯ ಪೊಲೀಸರು ಸಿ.ಆರ್.ಪಿ.ಎಫ್. ಯೋಧರು ಹಾಗೂ 34ನೇ ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರರು ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಕಾರ್ಯಪವೃತ್ತರಾದ ಯೋಧರು ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಮಾರ್ಪಡಿಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










