ಕರ್ನಾಟಕದಲ್ಲಿ ಇಂದು 187 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ-ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ…

142
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 187 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. ಹಾಗೂ ಮಹಾಮಾರಿ ಕೊರೊನಾ ಸೋಂಕಿಗೆ ಇಂದು ಒಂದು ಬಲಿಯಾಗಿದ್ದು, ಮೃತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್‍ನಲ್ಲಿ ಇಂದು ಉಡುಪಿ-73, ಬೆಂಗಳೂರು ನಗರ-28, ಕಲಬುರಗಿ-24, ಹಾಸನ-16, ಮಂಡ್ಯ-15, ಶಿವಮೊಗ್ಗ-9, ಚಿಕ್ಕಬಳ್ಳಾಪುರ-5, ದಕ್ಷಿಣ ಕನ್ನಡ-4, ಬಳ್ಳಾರಿ-3, ಬೀದರ್-2, ಬಾಗಲಕೋಟೆ-2, ಧಾರವಾಡ-2, ವಿಜಯಪುರ, ಕೋಲಾರ, ಹಾವೇರಿ ಹಾಗೂ ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ತಗುಲಿರುವುದು ದೃಢವಾಗಿದೆ. ರಾಜ್ಯದಲ್ಲಿ 3,408 ಮಂದಿ ಸೋಂಕಿತರ ಪೈಕಿ 1328 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ 2026 ಮಂದಿ ಸೋಂಕಿತರು ರಾಜ್ಯದ ನಿಗಧಿತ ಆಸ್ಪತ್ರೆಗಳಳ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.