ಮೂಡಿಗೆರೆ : ಧರ್ಮಸ್ಥಳದಲ್ಲಿ ದರ್ಶನಕ್ಕೆ ಅವಕಾಶ ಹಿನ್ನಲೆ ಕೊಟ್ಟಿಗೆಹಾರ, ಚಾರ್ಮಾಡಿಗೆ ಹರಿದು ಬಂದ ಭಕ್ತಾಧಿಗಳು…

413
firstsuddi

ಕೊಟ್ಟಿಗೆಹಾರ: ಕೊರೊನಾ ವೈರಸ್ ಲಾಕ್‍ಡೌನ್ ನಿಂದಾಗಿ ಕಳೆದ 2 ತಿಂಗಳಿನಿಂದ ಲಾಕ್ ಆಗಿದ್ದ ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ದೇವಸ್ಥಾನದಲ್ಲಿ ಇಂದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುವ ಭಕ್ತಾಧಿಗಳು ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತಾಧಿಗಳು ಕೊಟ್ಟಿಗೆಹಾರದಲ್ಲಿ ಕೆಲ ಕಾಲ ವಾಹನ ನಿಲ್ಲಿಸಿ ಹೋಟೆಲ್‍ನಲ್ಲಿ ಊಟ ಉಪಹಾರ ಸೇವಿಸಿ ಧರ್ಮಸ್ಥಳ ಕಡೆಗೆ ಸಾಗಿದರು. ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ಕೊಟ್ಟಿಗೆಹಾರ ಸೋಮವಾರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಕೆಲ ತಿಂಗಳಿಂದ ವ್ಯಾಪಾರವಿಲ್ಲದೇ ಬಸವಳಿದಿದ್ದ ವರ್ತಕರ ಮೊಗದಲ್ಲಿ ಪ್ರವಾಸಿಗರ ಆಗಮನ ಮಂದಹಾಸ ಮೂಡಿಸಿತು.