ಆರ್ಥಿಕ ಸಂಕಷ್ಟ ಹಿನ್ನೆಲೆ ಮಲ್ಪೆಯಲ್ಲಿ ಲಂಗರು ಹಾಕಿದ ಬೋಟಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ…

183
firstsuddi

ಉಡುಪಿ: ಆರ್ಥಿಕ ಸಂಕಷ್ಟದ ಹಿನ್ನೆಲೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯಲ್ಲಿ ಸಂಭವಿಸಿದೆ. ಮೃತ ಯುವಕನನ್ನು ತೊಟ್ಟಂ ಸಮೀಪದ ಪೌಂಜಿ ಗುಡ್ಡೆ ನಿವಾಸಿ ಭಾಗ್ಯರಾಜ್ ಎಂದು ಗುರುತಿಸಲಾಗಿದೆ. ಮೃತ ಯುವಕ ಭಾಗ್ಯರಾಜ್ ಸಾಲ ಮಾಡಿ ಮನೆ ಮತ್ತು ಮೀನುಗಾರಿಕಾ ಬೋಟ್ ಖರೀದಿಸಿದ್ದು ವ್ಯವಹಾರದಲ್ಲಿ ತೀರ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯುವಕ ಉತ್ತಮ ಕಬಡ್ಡಿ ಪಟು ಆಗಿದ್ದರು. ಸ್ಥಳಕ್ಕೆ ಮಲ್ಪೆ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ.