ಮೂಡಿಗೆರೆ : ಹ್ಯಾಂಡ್ ಪೋಸ್ಟ್ ಗ್ರೀನ್ ಸ್ಟೋರ್ ಮಾಲೀಕರಾದ ಅಬುಸಾಲಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಹೆಜಮಾಡಿ ಮನೆಯಲ್ಲಿ ನಿಧನರಾಗಿದ್ದಾರೆ. ಅಬುಸಾಲಿಜಿ ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ತಮ್ಮ ಹುಟ್ಟೂರಾದ ಉಡುಪಿ ಜಿಲ್ಲೆಯ ಕಾನಂಗಾರ್ ಗ್ರಾಮದ ಹೆಜಮಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಬುಸಾಲಿಜಿ ಅವರು ವಾಣಿಜ್ಯೋಧ್ಯಮದ ಜೊತೆ ಜೊತೆಗೆ ಸಾಮಾಜಿಕ ಸೇವೆ ಹಾಗೂ ರಾಜಕೀಯದಲ್ಲೂ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದರು. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಹ್ಯಾಂಡ್ ಪೋಸ್ಟ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಂತಾಪ : ಮೂಡಿಗೆರೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಬಿ.ಬಿ. ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜೀತ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿದಿರಹಳ್ಳಿ ಜಯರಾಂ, ಎಂ.ಎಂ ಲಕ್ಷ್ಮಣ ಗೌಡ, ಎಂ.ಎಸ್. ಅನಂತ್ , ನಯನ ಮೋಟಮ್ಮ, ಹಾಗೂ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಜನ್ನಾಪುರ ರಘು, ಪತ್ರಕರ್ತರಾದ ರಾಘವೇಂದ್ರ ಕೆಸವಳಲು, ವ್ಯಾಪರೋಧ್ಯಮಿ ಸುಂದರೇಶ್, ದಯಾನಂದ, ಕೆ.ಕೆ.ರವಿ ಸೆರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.










