ಆನ್‍ಲೈನ್ ತರಗತಿ ಅವಾಂತರ…!

1023
firstsuddi

ಮೊನ್ನೆ ಸ್ನೇಹಿತರೊಬ್ಬರು ಸಿಕ್ಕಾಗ primary classನಲ್ಲಿ ಕಲಿಯುತ್ತಿರುವ ಅವರ ಒಂಭತ್ತು ವರ್ಷದ ಮಗ ಮೊದಲಿನಿಗಿಂತಲೂ ಹೆಚ್ಚಾಗಿ ಮೊಬೈಲ್ ಫೊನ್ ಬಳಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮೊದಲೆಲ್ಲಾ ದಿನದಲ್ಲಿ ಒಂದು ಬಾರಿ ಫೋನ್‍ನಲ್ಲಿ games ಅಥವಾ ಅವನಿಗಿಷ್ಟದ cartoon ನೋಡುತ್ತಿದ್ದ ಅವನು lockdown ನಂತರ ಶಾಲೆಗಳು online ತರಗತಿ ಆಂಭಿಸಿದಾಗಿನಿಂದ ದಿನದ ಅತಿ ಹೆಚ್ಚು ಸಮಯ phone ಬಳಕೆಯಲ್ಲೇ ಕಳೆಯುತ್ತಿದ್ದಾನೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅವರ ಆತಂಕ ಎಂಬುವುದು ನನಗಾಗ ಅರಿವಾಯಿತು. ಆದರೆ ಇದು ಕೇವಲ ಅವರೊಬ್ಬರ ಸಮಸ್ಯೆಯಲ್ಲ ಪ್ರತಿ ಮನೆಯಲ್ಲೂ ಮಕ್ಕಳು ಈ ಸಮಸ್ಯೆಗೆ ಗುರಿಯಾಗಿದ್ದಾರೆ. ಕೊರೊನಾಗಿಂತ ಈ online ಪಾಠದ ಪರಿಣಾಮ ಪುಟ್ಟ ಮಕ್ಕಳ ಮೇಲೆ ಇನ್ನಷ್ಟು ಮಾರಕವಾಗಲಿದೆ.

ಸರ್ಕಾರ ಈ ನಿಟ್ಟಿನಲ್ಲಿ ಒಂದು ಸಾಮಾನ್ಯ ನೀತಿ ಜಾರಿ ಮಾಡದಿದ್ದರ ಪರಿಣಾಮ ಇದು. ಖಾಸಗಿ ಶಾಲೆಗಳಂತೂ ಫೀಸ್ ಕೀಳುವ ಉದ್ದೇಶದಿಂದ L.K.G ಯ ಪುಟ್ಟ ಹಸುಳೆಗಳಿಗೂ online ತರಗತಿ ಶುರು ಮಾಡಿದ್ದು ಅವಿವೇಕತನದ ಪರಮಾವಧಿ. ಇನ್ನು ಎಲ್ಲಾ ಮನೆಗಳಲ್ಲೂ ಸ್ಮಾರ್ಟ್ ಫೋನ್, ಲ್ಯಾಪ್‍ಟಾಪ್ ಅಥವಾ ಕಂಪ್ಯೂಟರ್ ಸೌಲಭ್ಯ ಇರುವುದಿಲ್ಲ. ಇದ್ದರೂ ಅದು ಸ್ಮಾರ್ಟ್ ಫೋನ್‍ಗೆ ಸೀಮಿತ. ಸ್ಮಾರ್ಟ್ ಫೋನಿನ ಪುಟ್ಟ ಸ್ಕ್ರೀನ್ ಮೇಲೆ ಶಾಲೆಯವರು ಕಳುಹಿಸುವ ಪಾಠಗಳನ್ನು ಮಕ್ಕಳು ಕಣ್ಣು ಕಿರಿದು ಮಾಡಿಕೊಂಡು ದಿನವೆಲ್ಲಾ ಬರೆಯಬೇಕು ಅಥವಾ ಓದಬೇಕು ಒಮ್ಮೆ ಯೋಚಿಸಿ ಈ ಪುಟ್ಟ ಕಂದಮ್ಮಗಳ ಕಣ್ಣಿನ ಆರೋಗ್ಯ ಎಷ್ಟು ಹದಗೆಡಬಹುದು.
ಈಗಾಗಲೇ ತಜ್ಞರು, ವಿಜ್ಞಾನಿಗಳು ಅತಿ ಹೆಚ್ಚು ಗ್ಯಾಜೆಟ್‍ಗಳ radiation ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಕಣ್ಣಿನ ಆರೋಗ್ಯವನ್ನೂ ಒಳಗೊಂಡಂತೆ ಹಲವಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುವುದನ್ನು ಸಂಶೋಧನೆಗಳ ಮುಖಾಂತರ ಸಾಭೀತುಪಡಿಸಿದ್ದಾರೆ. ಸರ್ಕಾರ ಕೂಡಾ ಈ ಹಿಂದೆ ಮಕ್ಕಳ ಮೊಬೈಲ್ ಬಳಕೆಯ ನಿರ್ಬಂಧಕ್ಕೆ ಹಲವಷ್ಟು guidelines ಗಳನ್ನು ಹೊರಡಿಸಿತ್ತು.
ಆದರೆ ಈಗ ಸರ್ಕಾರದ ಕಣ್ಣ ಮುಂದೆಯೇ ಮಕ್ಕಳು ಈಗ online ಶಿಕ್ಷಣದ ಶೋಷಣೆಗೆ ಗುರಿಯಾಗಿದ್ದಾರೆ. ನಿರಂತರ ಮೊಬೈಲ್ ಬಳಕೆ ಮಕ್ಕಳಲ್ಲಿ ದೃಷ್ಠಿ ದೋಷದ ಜೊತೆ, ಖಿನ್ನತೆ, ಬಳಲಿಕೆ ಹಾಗೂ ಇನ್ನಿತರ ಶಾಶ್ವತ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇನ್ನು online ತರಗತಿಯ ಸಫಲತೆ ಕೂಡಾ ಶೂನ್ಯ.

online ನಲ್ಲಿ ಲಭ್ಯವಿರುವ ಪಠ್ಯಗಳು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳಂತೂ zoom ಅಂತಹ online ತರಗತಿಯಲ್ಲಿ ear phone ಕಿವಿಗಿರಿಸಿ, ಮ್ಯೂಟ್ ಮಾಡಿಕೊಂಡು ಬೇರೆ ಇನ್ಯಾವುದೋ social media ಬಳಕೆ ಮಾಡುತ್ತಾ ದಾರಿತಪ್ಪುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಈ ನಿಟ್ಟಿನಲ್ಲಿ ಸರ್ಕಾರದ ಕ್ರಮ ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ. lockdown ಅವಧಿಯ ಈ ಎರಡೂವರೆ ತಿಂಗಳಲ್ಲಿ ಶಿಕ್ಷಣ ಇಲಾಖೆ ಇದರ ಸಾಧಕ ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಯಾವುದೇ ಅಧಿಕೃತ ನಿಯಮ ಜಾರಿ ಮಾಡಿಲ್ಲ.
ಮಾನ್ಯ ಶಿಕ್ಷಣ ಸಚಿವರು ಸುದ್ಧಿಗೋಷ್ಠಿಗಳಲ್ಲಿ ಈ ವಿಷಯದ ಬಗ್ಗೆ ತಜ್ಞರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ ಎಂಬ ಮಾಹಿತಿ ನೀಡಿದ್ದಾರಷ್ಟೇ. ಮುಂದಿನ ಸಮಾಜದ ಆಸ್ತಿಯಾದ ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ದೃಷ್ಠಿಯಲ್ಲಿರಿಸಿಕೊಂಡು ಸರ್ಕಾರ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂಬುದೇ ನಮ್ಮ ಆಶಯ.