ಮೈಸೂರು : ಕೊರೊನಾ ವೈರಸ್‍ನಿಂದಾಗಿ ನಡೆಯುತ್ತಿದ್ದ 5ನೇ ತರಗತಿ ವರೆಗಿನ ಆನ್‍ಲೈನ್ ಶಿಕ್ಷಣ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‍ಲೈನ್ ಶಿಕ್ಷಣದ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿ ಇದೆ. ಆದರೆ ಇದೇ ವೇಲೆ ಪಿಯುಸಿವರೆಗಿನ ಆನ್‍ಲೈನ್ ಶಿಕ್ಷಣ ಕೂಡಾ ರದ್ದುಗೊಳಿಸಬೇಕು. ನಾನು ಮೊದಲಿನಿಂದಲೂ ಆನ್‍ಲೈನ್ ಶಿಕ್ಷಣ ಪದ್ದತಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಶಾಲೆಯಲ್ಲಿಯೇ ಪಾಠ ಮಾಡಬೇಕು. ಹಾಗೂ ಖಾಸಗಿ ಶಾಲೆಗಳ ಶುಲ್ಕವನ್ನು ಕಡಿಮೆ ಮಾಡುವ ವಿಚಾರದ ಕುರಿತು ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.










