ಮೂಡಿಗೆರೆ : ನೆರೆಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ : ಅಮೃತ್ ಶೆಣೈ.

448
firstsuddi

ಬಣಕಲ್: ಕಳೆದ ವರ್ಷ ನೆರೆಪೀಡಿತ ಪ್ರದೇಶಗಳಲ್ಲಿ ನೆಲೆ ಇಲ್ಲದೇ ಅತಂತ್ರರಾಗಿರುವ ನೆರೆಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಭಾಗದ ನೆರೆಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ನೆರೆ ಪರಿಹಾರ ತಲುಪಲು ಸಂಸದೆ ಶೋಬಾ ಕರಂದ್ಲಾಜೆ, ಉಸ್ತುವಾರಿ ಸಚಿವ ಸಿ.ಟಿ ರವಿ, ಹಾಗೂ ಈ ಭಾಗದ ಶಾಸಕರು ಆಸಕ್ತಿ ತೋರಿಸಿಲ್ಲ. ಕಳೆದ ವರ್ಷನೆರೆ ಬಂದು 30 ಸಾವಿರ ಕೋಟಿ ನಷ್ಟವಾಗಿದೆ. ಉತ್ತರ ಕರ್ನಾಟಕ ಸಂಪೂರ್ಣ ಮುಳುಗಿ ಹೋಗಿ ಇತಿಹಾಸದಲ್ಲೆ ನೋಡದಷ್ಟು ನೆರೆ ಬಂದು ಸಾಕಷ್ಟು ಸಾವು ನೋವು ಸಂಭವಿಸಿದೆ. 30 ಸಾವಿರ ಕೋಟಿ ನಷ್ಟವಾದರೂ ಕೇಂದ್ರ ಸರ್ಕಾರದಿಂದ ಕೇವಲ 1 ಸಾವಿರ ಕೋಟಿ ರೂ ಘೋಷಣೆ ಮಾಡಲಾಗಿದೆ. 28 ಸಂಸದರಿದ್ದರೂ ಕೂಡ ಪ್ರಧಾನಿಯರ ಮುಂದೆ ಕೈಕಟ್ಟಿ ಬಾಯಿ ಮುಚ್ಚಿ ಕುಳಿತಿದ್ದಾರೆ. ಕನ್ನಡ ನೆಲ ಜಲ ಭಾಷೆ ಬಗ್ಗೆ ಹೋರಾಟ ಮಾಡುವ ತಾಕತ್ತು ಯಾವ ಸಂಸದರಿಗೂ ಬಂದಿಲ್ಲ ಎಂದು ಎಂದರು.
ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕರ್ನಾಟಕ ರಾಷ್ರ್ರೀಯ ಸಮಿತಿ ಪಕ್ಷ ಹುಟ್ಟಿಕೊಂಡಿದೆ. ದೆಹಲಿಯಲ್ಲಿ ರಾಜಕೀಯದ ಅನುಭವವೇ ಇಲ್ಲದ ಅರವಿಂದ ಕ್ರೇಜಿವಾಲ್ ಮೊದಲ ಚುನಾವಣೆಯಲ್ಲೆ ಮುಖ್ಯಮಂತ್ರಿಯಾದರು. ಯಾವುದು ಅಸಾದ್ಯವಿಲ್ಲ ಎಂಬುದನ್ನು ಅವರೇ ತೋರಿಸಿದ್ದಾರೆ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷವನ್ನು ಈ ರಾಜ್ಯದಲ್ಲಿ ಸಂಘಟಿಸಲಾಗುವುದು ಎಂದರು.
ಕರ್ನಾಟಕ ರಾಷ್ಟ್ರೀಯ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ದೇಶದ ಬದಲಾವಣೆ ಕಂಡುಕೊಳ್ಳಲು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ ಸರ್ವ ಸನ್ನದ್ದವಾಗಿದೆ. 2023 ರಲ್ಲಿ ರಾಜ್ಯದ 224 ಸ್ಥಾನಗಳನ್ನು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ ಗೆಲ್ಲಲಿದೆ ಎಂದರು.