ಕಳಸ : ಮಾವಿನಕೆರೆ ಎಸ್ಟೇಟ್‍ನ ಪಾಲುದಾರರಿಂದ ಕಾರ್ಮಿಕರಿಗೆ ಬಟ್ಟೆ ಹಾಗೂ ಆಹಾರದ ಕಿಟ್ ವಿತರಣೆ…

213
firstsuddi

ಕಳಸ : ಇಲ್ಲಿನ ಮಾವಿನಕೆರೆ ಎಸ್ಟೇಟ್ ನ 120 ಕಾರ್ಮಿಕರಿಗೆ ಬಟ್ಟೆ ಹಾಗೂ ಆಹಾರದ ಕಿಟ್ ಸಾಮಾಗ್ರಿಗಳನ್ನು ಎಸ್ಟೇಟಿನ ಪಾಲುದಾರರಾದ ಪ್ರಭುದಾಸ್ ಕೊಟೇಚಾ ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರೊಂದಿಗೆ ಮಾತನಾಡಿದ ಅವರು ಕೊರೋನದಿಂದಾಗಿ ಕಾರ್ಮಿಕ ವರ್ಗಕ್ಕೂ ಅರ್ಥಿಕತೆಯ ಹೊಡೆತ ಬಿದ್ದಿದೆ. ಕಾರ್ಮಿಕರಿದ್ದರೆ ಮಾತ್ರ ನಮ್ಮ ಜೀವನವೂ ಸಾಗುತ್ತದೆ. ಕಾರ್ಮಿಕರನ್ನು ನಾವು ದೇವರಂತೆ ಕಾಣಬೇಕು. ಒಂದು ದಿನ ಕಾರ್ಮಿಕ ವರ್ಗ ಕೈಕಟ್ಟಿ ಕುಳಿತರೆ ಅವರನ್ನೆ ನಂಬಿರುವ ಯಾವುದೇ ಉದ್ಯಮಿಯೂ ಕೂಡ ಏನೂ ಮಾಡಲಾರ. ಈ ನಿಟ್ಟಿನಲ್ಲಿ ನಾವು ಮುಂಬಾಯಿಯಲ್ಲಿದ್ದರೂ ಕೂಡ ಅಲ್ಲಿಂದ ಬಂದು ಇಲ್ಲಿಯ ಕಾರ್ಮಿಕ ವರ್ಗದ ಕ್ಷೇಮ ಸಮಾಚಾರ ತಿಳಿದುಕೊಂಡು ಈ ಸಂದರ್ಭದಲ್ಲಿ ಅವರಿಗೆ ಆಹಾರ ಮತ್ತು ಬಟ್ಟೆಗಳನ್ನು ಒಳಗೊಂಡಿರುವ ಕಿಟ್‍ಗಳನ್ನು ವಿತರಣೆಯನ್ನು ಮಾಡುತ್ತಿದ್ದೇವೆ. ಹಾಗೇ ಅವರ ಆರೋಗ್ಯದ ಮೇಲೆಯೂ ನಾವು ಹೆಚ್ಚಿನ ಮುತುವರ್ಜಿಯನ್ನು ಇಟ್ಟುಕೊಂಡು ನಮ್ಮ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದೆ ಇರುವ ಹಾಗೆ ನೋಡಿಕೊಳ್ಳುತ್ತೇವೆ. ನಾವು ನಿಮ್ಮ ನಿಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಅಷ್ಟೇ ಪ್ರತಿಫಲವನ್ನು ಕೂಡ ನಿಮ್ಮಿಂದ ಬಯಸುತ್ತೇವೆ.
ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆರೋಗ್ಯಕ್ಕೆ ತೊಂದರೆಯನ್ನು ಮಾಡಿಕೊಳ್ಳದೆ. ದಿನ ನಿತ್ಯ ಶುಚಿತ್ವವನ್ನು ಕಾಪಾಡಿಕೊಂಡು ಕೆಲಸವನ್ನು ಮಾಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ನಂತರ ಪ್ರತಿಯೊಬ್ಬ ಕಾರ್ಮಿಕರಿಗೂ ಆಹಾರದ ಕಿಟ್ಗಳನ್ನು ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಎಸ್ಟೇಟಿನ ಮ್ಯಾನೇಜಿಂಗ್ ಪಾಟ್ನರ್ ರುಪೀನ್ ಇದ್ದರು.