ಸಚಿವ ಸಿ.ಟಿ. ರವಿ ಹಾಗೂ ಶಾಸಕ ಕುಮಾರಸ್ವಾಮಿ ಅವರು ಲಾಕ್‍ಡೌನ್ ಉಲ್ಲಂಘನೆ ಖಂಡನೀಯ

760

ಕೊಟ್ಟಿಗೆಹಾರ : ಈ ತಿಂಗಳ 5ರ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಇದ್ದರೂ ಕೂಡ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹಾಗೂ ಶಾಸಕರದ ಎಂ.ಪಿ. ಕುಮಾರಸ್ವಾಮಿ  ಅವರು ಲಾಕ್‍ಡೌನ್ ಉಲ್ಲಂಘಿಸಿ ಮೂಡಿಗೆರೆಯ ಪ್ರವಾಸಿ ತಾಣಗಳಿಗೆ ಬೇಟಿ ನೀಡಿರುವುದು ಖಂಡನೀಯ ಎಂದು ಜೆಡಿಎಸ್ ಯುವಜನತಾದಳ ಕ್ಷೇತ್ರಸಮಿತಿ ಕಾರ್ಯಾಧ್ಯಕ್ಷರಾದ ಆದರ್ಶ ಬಾಳೂರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಭಾನುವಾರದ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ರಾಜ್ಯದ ಜನ ಸಾಮಾನ್ಯರು ಮನೆಯಲ್ಲಿಯೆ ಇದ್ದರು. ಆದರೆ ಸಚಿವ ಸಿ.ಟಿ ರವಿ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ  ಅವರಿಗೆ ಆ ನಿಯಮ ಅನ್ವಯವಾಗದೇ ಇರುವುದು ದುರದುಷ್ಟಕರ. ಸಚಿವ ಸಿ.ಟಿ ರವಿ ಅವರು ದೇವರಮನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಅವರ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಸಾಮಾಜಿಕ ಅಂತರ ಪಾಲಿಸಿರಲಿಲ್ಲ. ಕೆಲವರು ಮಾಸ್ಕ್ ಧರಿಸಿರಲಿಲ್ಲ. ಅಧಿಕಾರಿಗಳು ಲಾಕ್‍ಡೌನ್‍ನಿಂದಾಗಿ ಹೊರ ಬರಲು ಹಿಂಜರಿದರೂ ಕೂಡ ಸಚಿವರ ಒತ್ತಡಕ್ಕೆ ಮಣಿದು ಅವರೊಂದಿಗೆ ಲಾಕ್‍ಡೌನ್ ದಿನದಲ್ಲಿಯೂ ಕೂಡ ಬರುವಂತಾಯಿತು. ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ದೃಡ ಪಟ್ಟಿರುವುದರಿಂದ ಅಧಿಕಾರಿಗಳ ಕುಟುಂಬದವರಿಗೂ ಇದರಿಂದ ಆತಂಕ ಉಂಟಾಗಿದೆ ಎಂದರು.
ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೆ ನಿಯಮ ಉಲ್ಲಂಘಿಸಿರುವುದು ಖಂಡನೀಯ. ಇದರ ಬಗ್ಗೆ ಮುಖ್ಯಮಂತ್ರಿಗಳು ಇದರ ಬಗ್ಗೆ ಜನಸಾಮಾನ್ಯರಿಗೆ ಪ್ರತಿಕ್ರಿಯೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.