ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್‍ವುಡ್ ನಟ ಆತ್ಮಹತ್ಯೆಗೆ ಶರಣು…

276
firstsuddi

ಮಂಡ್ಯ : ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್‍ವುಡ್ ನಟ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ನಡೆದಿದೆ. ಸುಶೀಲ್ ಕುಮಾರ್(30) ಆತ್ಮಹತ್ಯೆಗೆ ಶರಣಾದ ನಟ ಎಂದು ಗುರುತಿಸಲಾಗಿದ್ದು, ಮಂಡ್ಯದ ವಿವಿ ನಗರ ಬಡಾವಣೆಯ ನಿವಾಸಿಯಾಗಿರುವ ನಟ ಸುಶೀಲ್ ಕುಮಾರ್ ಅವರು ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಕಳೆದ ಮೂರು ತಿಂಗಳಿನಿಂದ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳಿನಿಂದ ಮಂಡ್ಯದಲ್ಲೇ ನೆಲೆಸಿದ್ದರು. ಆದರೆ ಕೆಲವು ದಿನಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎನ್ನಲಾಗಿದ್ದು, ಹೀಗಾಗಿ ಮಂಡ್ಯದಲ್ಲೇ ಇರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ಬಳಿಕ ಸ್ನೇಹಿತನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ಸುಶೀಲ್ ಕುಮಾರ್ ಅವರು “ಸಲಗ” ಹಾಗೂ “ಕಮರೊಟ್ಟು ಚೆಕ್ ಪೋಸ್ಟ್” ಸಿನಿಮಾಗಳಲ್ಲಿ ಅಭಿನಯಿಸಿದ್ದರು.