ಕೊಟ್ಟಿಗೆಹಾರ:2020ನೇ ಸಾಲಿನ ಐಸಿಎಸ್‍ಸಿ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಬಣಕಲ್‍ನ ನಜರೆತ್ ಶಾಲೆ ಶೇ 100 ರಷ್ಟು ಫಲಿತಾಂಶ ಪಡೆದುಕೊಂಡಿದೆ.ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 14 ವಿದ್ಯಾರ್ಥಿಗಳು ಪ್ರಥಮ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಅದೀಶ್ ಎಸ್.ಐ (92.20%), ಉತ್ತುಂಗ್ ಎ.ಯು (92.20%), ಯಜ್ಞಾ ಡಿ.ಜೆ (92%), ತ್ರಿಶಾ ಆರ್ (91 %) ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ವರ್ಗ, ಶಿಕ್ಷಕರು, ಪೋಷಕರು ಅಭಿನಂಧನೆ ತಿಳಿಸಿದ್ದಾರೆ.










