ಮೂಡಿಗೆರೆ : ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್-19 ಸೋಂಕು ಇಲ್ಲ-ಶಾಖಾ ವ್ಯವಸ್ಥಾಪಕರಿಂದ ಸ್ಪಷ್ಟನೆ…

298
firstsuddi

ಮೂಡಿಗೆರೆ: ಪ್ಟಣದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಸೋಕು ದೃಢಪಟ್ಟಿಲ್ಲ, ಗ್ರಾಹಕರು ಆತಂಕ ಪಡಬೇಕಿಲ್ಲ ಎಲ್ಲರೂ ಎಂದಿನಂತೆ ಬ್ಯಾಂಕಿಗೆ ಬಂದು ವ್ಯವಹಾರ ನಡೆಸಬಹುದು ಎಂದು ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಬಂದಿರಬಹುದು ಎನ್ನುವ ಹಿನ್ನೆಲೆಯಲ್ಲಿ ಶಾಖೆಯ ಸಿಬ್ಬಂದಿಯೋರ್ವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಸಿಬ್ಬಂದಿಗೆ ಸೋಂಕು ಇರುವುದರ ಬಗ್ಗೆ ಇದುವರೆಗೂ ದೃಢಪಟ್ಟಿಲ್ಲ. ಸೋಂಕು ದೃಢಪಡದ ಹಿನ್ನೆಲೆಯಲ್ಲಿ ಬ್ಯಾಂಕಿನ ವ್ಯವಹಾರಗಳು ಎಂದಿನಂತೆ ನಡೆಯುತ್ತವೆ. ಗ್ರಾಹಕರು ಆತಂಕ ಪಡದೆ ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಬ್ಯಾಂಕಿಗೆ ಆಗಮಿಸಬಹುದು ಎಂದು ತಿಳಿಸಿದ್ದಾರೆ.
ಆದರೂ ಸಹ ಮುಂಜಾಗೃತಾ ಕ್ರಮವಾಗಿ ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕ್ ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಶಾಖೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇಂದಿನಿಂದ ಎಂದಿನಂತೆ ಬ್ಯಾಂಕ್ ವ್ಯವಹಾರಗಳು ನಡೆಯುತ್ತವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.